ಗುರುವಾರ Dollar ಎದುರು ಭಾರತೀಯ Rupee ಮತ್ತೊಮ್ಮೆ ದಾಖಲೆಯ ಮಟ್ಟಕ್ಕೆ ಕುಸಿದಿದೆ. ದೇಶೀಯ Currency ಯು ಹಿಂದಿನ ದಿನದ 79.98 ರೂಪಾಯಿ ಮೌಲ್ಯದ ವಿರುದ್ಧವಾಗಿ ಗುರುವಾರದಂದು ಡಾಲರ್‌ಗೆ 80.01 ರೂಪಾಯಿ ಮೊತ್ತಕ್ಕೆ ವಹಿವಾಟು ಆರಂಭಗೊಂಡಿತು. ಕಡಿಮೆ ಸಮಯದಲ್ಲಿಯೇ 80.063 ರೂಪಾಯಿಯ ಜೀವಮಾನದ ಕನಿಷ್ಠ ಮಟ್ಟವನ್ನು ತಲುಪಿತು.
ಡಾಲರ್ ನ ಬಲವರ್ಧನೆ, ಕಚ್ಚಾ ತೈಲ ಬೆಲೆ ಏರಿಕೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿನ ವಿದ್ಯಮಾನಗಳು ರೂಪಾಯಿಯ ಸಾರ್ವಕಾಲಿಕ ಕುಸಿತಕ್ಕೆ ಕಾರಣವಾಗಿದೆ.