ಬಾಂಗ್ಲಾದೇಶದ (Bangladesh) ಸ್ಟಾರ್ ಆಲ್ರೌಂಡರ್ ಶಕೀಬ್ ಅಲ್ ಹಸನಿಗೆ (Shakib Al Hasan) ಕ್ರಿಕೆಟ್‌ನಲ್ಲಿ ಭಾರಿ ಸಂಕಷ್ಟ ಎದುರಾಗಿದೆ. ಇತ್ತೀಚೆಗೆ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (England Cricket Board) ಶಕೀಬ್ ಅವರ ಮೇಲೆ ECB ಟೂರ್ನಿಗಳಲ್ಲಿ ಬೌಲಿಂಗ್ ಮಾಡದಂತೆ ನಿಷೇಧ ಹಾಕಿತ್ತು. ಈ ನಿರ್ಧಾರದ ಬಳಿಕ, ಭಾನುವಾರ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಶಕೀಬ್ ಅವರ ಮೇಲೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್ ನಿಷೇಧವನ್ನೂ ಘೋಷಿಸಿದೆ.
ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ಶಕೀಬ್ ಅವರ ಬೌಲಿಂಗ್ ಆ್ಯಕ್ಷನ್ ಅನ್ನು ಕಾನೂನುಬಾಹಿರ ಎಂದು ಘೋಷಿಸಿದೆ. ಅವರ ಬೌಲಿಂಗ್ ಆಕ್ಷನ್ 15 ಡಿಗ್ರಿಯ ಮಿತಿಯನ್ನು ದಾಟಿದ ಕಾರಣ, ಶಕೀಬ್ ಅವರ ಮೇಲೆ ನಿಷೇಧ ಹೇರಲಾಗಿದೆ.
ಇಂಗ್ಲೆಂಡ್ ಕೌಂಟಿ ಕ್ರಿಕೆಟ್‌ನಲ್ಲಿ ಶಕೀಬ್, ಸರ್ರೆ ತಂಡದ ಭಾಗವಾಗಿ ಆಡಿದ್ದು, ಸೋಮರ್‌ಸೆಟ್ ವಿರುದ್ಧ ಮೊದಲ ಇನಿಂಗ್ಸ್‌ನಲ್ಲಿ 33.5 ಓವರ್‌ಗಳನ್ನು ಬೌಲ್ ಮಾಡಿದ್ದ ಅವರು 97 ರನ್‌ಗಳಿಗೆ 4 ವಿಕೆಟ್‌ಗಳನ್ನು ಪಡೆದಿದ್ದರು. ನಂತರ ಎರಡನೇ ಇನಿಂಗ್ಸ್‌ನಲ್ಲಿ 29.3 ಓವರ್‌ಗಳನ್ನು ಬೌಲ್ ಮಾಡಿ 96 ರನ್‌ಗಳಿಗೆ 5 ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದರು.
ಶಕೀಬ್ 71 ಟೆಸ್ಟ್ ಪಂದ್ಯಗಳಲ್ಲಿ 4609 ರನ್ ಗಳಿಸಿದ್ದಾರೆ, ಜೊತೆಗೆ 246 ವಿಕೆಟ್‌ಗಳನ್ನು ಪಡೆದಿದ್ದಾರೆ. 247 ಏಕದಿನ ಪಂದ್ಯಗಳಲ್ಲಿ 7570 ರನ್ ಹಾಗೂ 317 ವಿಕೆಟ್‌ಗಳನ್ನು ಪಡೆದಿದ್ದಾರೆ.