back to top
20.6 C
Bengaluru
Saturday, October 11, 2025
HomeKarnatakaUttara Kannadaಕಾರ್ಮಿಕ ಸಚಿವರಿಂದ ಸಂಚಾರಿ ಆಸ್ಪತ್ರೆ ಉದ್ಘಾಟನೆ

ಕಾರ್ಮಿಕ ಸಚಿವರಿಂದ ಸಂಚಾರಿ ಆಸ್ಪತ್ರೆ ಉದ್ಘಾಟನೆ

- Advertisement -
- Advertisement -

Yellapur, Uttara Kannada : ‘ಶ್ರಮಿಕ ಸಂಜೀವಿನಿ’ (Shramika Sanjivini) ಯೋಜನೆ ಯಡಿಯಲ್ಲಿ ಪ್ರಾರಂಭಗೊಂಡ ಸಂಚಾರಿ ಆಸ್ಪತ್ರೆಯನ್ನು (Mobile Hospital) ಭಾನುವಾರ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ (Arbail Shivaram Hebbar) ಯಲ್ಲಾಪುರ ಪಟ್ಟಣದಲ್ಲಿ ಉದ್ಘಾಟಿಸಿದರು.

‘ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗಾಗಿ ಸಂಚಾರಿ ಆರೋಗ್ಯ ಆಸ್ಪತ್ರೆಯನ್ನು ಪ್ರಥಮವಾಗಿ ಉತ್ತರಕನ್ನಡ, ಧಾರವಾಡ, ಬೆಳಗಾವಿ ಈ ಮೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ’ ಎಂದರು.

ಪ್ರಾಯೋಗಿಕವಾಗಿ ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗಾಗಿ ಸಂಚಾರಿ ಆರೋಗ್ಯ ಆಸ್ಪತ್ರೆಯನ್ನು ಪ್ರಥಮವಾಗಿ ಉತ್ತರಕನ್ನಡ, ಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಆರಂಭಿಸಲಾಗಿದ್ದು ಒಬ್ಬ ವೈದ್ಯ, ಇಬ್ಬರು ನರ್ಸ್, ಫಾರ್ಮಸಿಸ್ಟ್, ಲ್ಯಾಬ್ ಟೆಕ್ನಿಶಿಯನ್ ಹಾಗೂ ಚಾಲಕ-ಸಹಾಯಕ ಸಿಬ್ಬಂದಿ ಸೇರಿ 6 ಜನರ ತಂಡ ಒಳಗೊಂಡ ಈ ಸಂಚಾರಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಆಮ್ಲಜನಕ ಸೌಲಭ್ಯವುಳ್ಳ ಹಾಸಿಗೆ, ಪ್ರಥಮ ಚಿಕಿತ್ಸೆ ಕಿಟ್, ಪ್ರಯೋಗಾಲಯ, ಇಸಿಜಿ ಮಷಿನ್, ವ್ಹೀಲ್ ಚೇರ್, ರೆಫ್ರಿಜರೇಟರ್, ತುರ್ತು ಅಗತ್ಯ ಔಷಧಗಳೂ ಲಭ್ಯವಿರುತ್ತವೆ. ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿದ ವ್ಯಕ್ತಿಗಳಿಗೆ ಆರೋಗ್ಯ ಸೇವೆ ಸಿಗಲಿದ್ದು ದಿನದ 24 ಗಂಟೆ ಅವಧಿಯಲ್ಲಿ 155214ಕ್ಕೆ ಕರೆ ಮಾಡಿ ಸೇವೆ ಪಡೆಯಬಹುದು.’ ಎಂದು ಎಂದು ಹೇಳಿದರು.

ಸ್ಕಾಡ್‌ವೇಸ್ ಸಂಸ್ಥೆಗೆ ಈ ಸಂಚಾರಿ ಆಸ್ಪತ್ರೆ ಘಟಕವನ್ನು ವಹಿಸಿಕೊಡಲಾಗಿದ್ದು ಸ್ಕಾಡ್‌ವೇಸ್ ಮುಖ್ಯಸ್ಥ ವೆಂಕಟೇಶ ನಾಯ್ಕ, ಪಂಚಾಯತ್‌ರಾಜ್ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ರಾಜ್ಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸುನಂದಾ ದಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page