Shravanabelagola, Shravanbela Gola, Hassan : ಪುಷ್ಯ ಮಾಸ ಶುದ್ಧ ಬಹುಳ ಪಂಚಮಿ (Pushya Bahula Panchami) ನಿಮಿತ್ತ ಐತಿಹಾಸಿಕ ಚಂದ್ರಗಿರಿಯ (Chandragiri – Chikkabetta) ಚಿಕ್ಕಬೆಟ್ಟದಲ್ಲಿ ಕ್ಷೇತ್ರದ ಪೀಠಾಧಿಪತಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ (Charukeerthi Bhattaraka Swamiji) ಅವರ ಮಾರ್ಗದರ್ಶನದಲ್ಲಿ ಅಂತರಾಳ ಪಾರ್ಶ್ವನಾಥ ಸ್ವಾಮಿಗೆ (Parshvanatha) ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅಭಿಷೇಕವು ಶುಕ್ರವಾರ ವೈಭವೋತೀತವಾಗಿ ನಡೆಯಿತು.
23ನೇ ತೀರ್ಥಂಕರರಾದ (Tirthankara) ಪಾರ್ಶ್ವನಾಥ ಸ್ವಾಮಿಯ 18 ಅಡಿಯ ಮೂರ್ತಿಯ ಮುಂಭಾಗದಲ್ಲಿ ಕಲಶಗಳನ್ನು ಪ್ರತಿಷ್ಠಾಪಿಸಿ ಭಕ್ತರು ಜಯಘಂಟೆ ಭಾರಿಸುತ್ತಿದ್ದಂತೆ ಜಲಾಭಿಷೇಕ ನೆರವೇರಿಸಲಾಯಿತು.7 ಹೆಡೆಯ ಪಾರ್ಶ್ವನಾಥರಿಗೆ ಹೆಡೆಯ ಮುಂದೆ ಬೆಣ್ಣೆಯ ಅಲಂಕಾರವನ್ನು ಮಾಡಿದ ನಂತರ ಕ್ಷೀರ, ಅರಿಶಿಣ, ಅಭಿಷೇಕಗಳನ್ನು ಮಾಡಿ ನೈವೇದ್ಯ ಅರ್ಪಿಸಿ ಪುಷ್ಪವೃಷ್ಟಿಯ ನಂತರ ಲೋಕ ಕಲ್ಯಾಣಾರ್ಥವಾಗಿ ಮಹಾಶಾಂತಿಧಾರವನ್ನು ನಡೆಸಲಾಯಿತು. ಅಖಂಡ ಮೂರ್ತಿಗೆ ವಿವಿಧ ಪುಷ್ಪಗಳ ಹಾರ ಅರ್ಪಿಸಿ ಮಹಾಮಂಗಳಾರತಿ ಮಾಡುತ್ತಿದ್ದಂತೆ ಭಾಗವಹಿಸಿದ್ದ ಶ್ರಾವಕ ಶ್ರಾವಕಿಯರು ಹಾಡುತ್ತಾ ಜಯಷೋಷಗಳನ್ನು ಕೂಗಿದರು. ಪಂಚಮಿ ಪ್ರಯುಕ್ತ ಯಕ್ಷಿಯರಾದ ಪದ್ಮಾವತಿ ದೇವಿ ಮತ್ತು ಕೂಷ್ಮಾಂಡಿನಿ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
ಸೇವಾಕರ್ತರಾಗಿ ನಾಗಕುಮಾರ್, ದೋರ್ಬಲಿಕುಮಾರ್, ವಿಜಯಕುಮಾರ್ ನಿರ್ವಹಿಸಿದರು. ಭಕ್ತರಿಗೆ ಗಂಧೋದಕ ವಿತರಿಸಲಾಯಿತು. ಪೂಜೆಯ ನೇತೃತ್ವವನ್ನು ಎಸ್.ಪಿ.ಜ್ವಾಲಕುಮಾರ್, ವಿಜಯಕುಮಾರ್, ಎಸ್.ಎಸ್.ವಿಮಲ್, ಚಿನ್ಮಯಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಮಿಟಿಯ ಮಾಜಿ ಸದಸ್ಯರಾದ ಎಸ್.ಎ.ಸುದರ್ಶನ್, ಶುಭಚಂದ್ರ, ವರ್ಧಮಾನಯ್ಯ ಉಪಸ್ಥಿತರಿದ್ದರು.