back to top
20.6 C
Bengaluru
Monday, November 24, 2025
HomeNewsRCB ವಿರುದ್ಧ ಗಾಯಕ Sonu Nigam ವಿವಾದಾತ್ಮಕ ಹೇಳಿಕೆ: ಅಭಿಮಾನಿಗಳಿಂದ ತೀವ್ರ ಆಕ್ರೋಶ

RCB ವಿರುದ್ಧ ಗಾಯಕ Sonu Nigam ವಿವಾದಾತ್ಮಕ ಹೇಳಿಕೆ: ಅಭಿಮಾನಿಗಳಿಂದ ತೀವ್ರ ಆಕ್ರೋಶ

- Advertisement -
- Advertisement -

ಇತ್ತೀಚೆಗೆ ಮುಕ್ತಾಯಗೊಂಡ IPL 2025 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಮೊದಲ ಬಾರಿಗೆ ಚಾಂಪಿಯನ್ ಆಗಿದೆ. 17 ವರ್ಷಗಳ ನಿರೀಕ್ಷೆಗೆ ತಡೆಯೊಡೆದಿರುವ ಈ ಸಾಧನೆಗೆ RCB ಅಭಿಮಾನಿಗಳು ಹರ್ಷ ವ್ಯಕ್ತಪಡಿಸುತ್ತಿರುವಾಗ, ಪ್ರಸಿದ್ಧ ಗಾಯಕ ಸೋನು ನಿಗಮ್ (Sonu Nigam) ನೀಡಿರುವ ಹೇಳಿಕೆ ಹೊಸ ವಿವಾದಕ್ಕೆ ದಾರಿ ಮಾಡಿದೆ.

ಸೋನು ನಿಗಮ್, “RCB ಟ್ರೋಫಿ ಗೆದ್ದ ನಂತರ ಜಗತ್ತಿನಲ್ಲಿ ಒಳ್ಳೆಯದೇನೂ ಆಗುತ್ತಿಲ್ಲ,” ಎಂದು ಟ್ವೀಟ್ ಮಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದರು. ಈ ಹೇಳಿಕೆಯಿಂದ RCB ಫ್ಯಾನ್ಸ್ ಸಿಟ್ಟಿಗೆದ್ದಿದ್ದಾರೆ. “ಈ ರೀತಿಯ ಮಾತುಗಳು ನಾಚಿಕೆಗೇಡಿನ ಸಂಗತಿ,” ಎಂಬಂತೆ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಅಲ್ಲದೆ, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಂಗೀತ ಕಾರ್ಯಕ್ರಮವೊಂದರಲ್ಲಿ ಪ್ರೇಕ್ಷಕರು ಕನ್ನಡ ಹಾಡುಗಳನ್ನು ಕೇಳಿದಾಗ, ಸೋನು ನಿಗಮ್ ಅವರು ಅದನ್ನು ಪಹಲ್ಗಾಮ್ ಘಟನೆಯೊಂದಿಗೆ ಹೋಲಿಸಿಕೊಂಡು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಅವರ ವಿರುದ್ಧ ಪ್ರಕರಣವೂ ದಾಖಲಾಗಿದೆಯಂತೆ.

RCB ಯ ಐತಿಹಾಸಿಕ ಗೆಲುವಿನ ಹಿನ್ನೆಲೆಯಲ್ಲಿ, ಗಾಯಕ ಸೋನು ನಿಗಮ್ ನೀಡಿದ ಕೆಲ ಹೇಳಿಕೆಗಳು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page