Bengaluru (Bangalore) : SSLC 2022 ಪೂರಕ ಪರೀಕ್ಷೆ (Supplementary) ಫಲಿತಾಂಶವನ್ನು (Result) ಇಂದು (July 21) ಪ್ರಕಟಿಸಲಾಗುತ್ತಿದ್ದು ವಿದ್ಯಾರ್ಥಿಗಳು ಅಧಿಕೃತ Website (https://karresults.nic.in/) ನಲ್ಲಿ ಮಧ್ಯಾಹ್ನ 12 ರ ನಂತರ ವೀಕ್ಷಿಸಬಹುದು ಮತ್ತು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿರುವ ಪೋನ್ ನಂಬರ್‌ಗಳಿಗೆ SMS ಮೂಲಕವೂ ಫಲಿತಾಂಶವನ್ನು ಕಳುಹಿಸಲಾಗುತ್ತದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್ (B C Nagesh) Tweet ಮೂಲಕ ತಿಳಿಸಿದ್ದಾರೆ.
ಈ ಬಾರಿ ಪೂರಕ ಪರೀಕ್ಷೆಗೆ 94,669 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು 37,479 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಮತ್ತು ಉತ್ತೀರ್ಣ ಪ್ರಮಾಣ ಶೇ.39.59 ಇದೆ ಎಂದು ಸಚಿವರು ಮಾಹಿತಿ ನೀಡಿದರು.