Bengaluru: IIM ಬೆಂಗಳೂರು ನಿರ್ದೇಶಕ ಪ್ರೊ. ಋಷಿಕೇಶ ಟಿ ಕೃಷ್ಣನ್ (Rishikesh T Krishnan) ವಿರುದ್ಧ ಮೀಸಲಾತಿ ನೀತಿ ಉಲ್ಲಂಘನೆಯ ಆರೋಪಗಳು ಕೇಳಿಬಂದಿದ್ದು, AIOBCSA, BANAE, ಮತ್ತು OBC ಫೆಡರೇಶನ್ ವಿದ್ಯಾರ್ಥಿಗಳು ಅವರ ರಾಜೀನಾಮೆಗೆ ಒತ್ತಾಯಿಸಿದರು.
ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನಾಕಾರರು ಜಮಾಯಿಸಿ, ಸಂವಿಧಾನಿಕ ಹಕ್ಕುಗಳು ಉಲ್ಲಂಘನೆಯಾಗುತ್ತಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. 120 ಅಧ್ಯಾಪಕರ ಹುದ್ದೆಗಳಲ್ಲಿ ಕೇವಲ 16 ಮಂದಿ ಹಿಂದುಳಿದ ಸಮುದಾಯಕ್ಕೆ ಸೇರಿದವರಿದ್ದಾರೆ. SC, ST ಮತ್ತು OBC ಮೀಸಲಾತಿ ನಿಯಮಗಳನ್ನು ಅನುಸರಿಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.
ಜಾತಿ ಸಂಬಂಧಿತ ದೂರುಗಳಿಗೆ ಮೀಸಲಾದ ಕುಂದುಕೊರತೆ ನಿವಾರಣಾ ಕೋಶ ಸ್ಥಾಪನೆ, ಎಲ್ಲಾ ಹುದ್ದೆಗಳಲ್ಲಿ ಸಮಾನ ಅವಕಾಶ ನೀಡುವ ಪ್ರಕ್ರಿಯೆ ಜಾರಿಗೊಳಿಸಲು ಆಗ್ರಹಿಸಿದರು. ಪ್ರಶ್ನೆ ಬಗೆಹರಿಯದಿದ್ದರೆ, ರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ಶಿಕ್ಷಣ ಸಚಿವರನ್ನು ಸಂಪರ್ಕಿಸಲು ಯೋಜನೆ.
ಸಮಾಜದ ಎಲ್ಲಾ ವರ್ಗಗಳ ಪ್ರತಿನಿಧಿತ್ವವನ್ನು ಖಚಿತಪಡಿಸಲು ವಿದ್ಯಾರ್ಥಿಗಳು ಪ್ರಾಮಾಣಿಕ ಹೋರಾಟ ಮುಂದುವರಿಸಿದ್ದಾರೆ.