Pune: ಇಥನಾಲ್ (ethanol) ಬಳಕೆ ಶುರುವಾದ ನಂತರ ದೇಶದ ಸಕ್ಕರೆ ಉದ್ಯಮ ಪುನರ್ಜೀವ ಪಡೆದಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು.
ಅವರು ಪುಣೆಯ ನಾಮ್ ಫೌಂಡೇಶನ್ ಕಾರ್ಯಕ್ರಮದಲ್ಲಿ ಮಾತನಾಡಿ, ಭಾರತದಲ್ಲಿ ಸಕ್ಕರೆ ಉತ್ಪಾದನೆ ಹೆಚ್ಚಾಗಿದೆ. ಇಥನಾಲ್ ಬಳಕೆಯಿಂದ ಸಕ್ಕರೆ ಕಾರ್ಖಾನೆಗಳು ಮತ್ತು ಕಬ್ಬು ರೈತರಿಗೆ ಲಾಭವಾಗಿದೆ ಎಂದರು.
ಗಡ್ಕರಿಯವರ ಮಕ್ಕಳಿಗೆ ಲಾಭವಾಗಲು ಇಥನಾಲ್ ಪ್ರೋತ್ಸಾಹಿಸಲಾಗುತ್ತಿದೆ, ಇ20 ಪೆಟ್ರೋಲ್ ವಾಹನಗಳಿಗೆ ಹಾನಿ ಮಾಡುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ. ಆದರೆ, ಇ20 ಪೆಟ್ರೋಲ್ ನಿಷೇಧಿಸಲು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಮಹಾರಾಷ್ಟ್ರದ ವಿದರ್ಭ ಮತ್ತು ಮರಾಠವಾಡ ಪ್ರದೇಶಗಳಲ್ಲಿ ರೈತರ ಆತ್ಮಹತ್ಯೆ ಹೆಚ್ಚುತ್ತಿರುವುದಕ್ಕೆ ನೀರಿನ ಕೊರತೆ ಒಂದು ಕಾರಣ. ಕೃಷಿಗೆ ಹೊಸ ತಂತ್ರಜ್ಞಾನ ಅಗತ್ಯ ಎಂದು ಗಡ್ಕರಿ ಅಭಿಪ್ರಾಯಪಟ್ಟರು.