back to top
20.7 C
Bengaluru
Monday, September 1, 2025
HomeAutoTata Sierra: ಹೊಸ ರೂಪದಲ್ಲಿ ಮರುಅವತಾರ, ಬೆಲೆ ಮತ್ತು ವೈಶಿಷ್ಟ್ಯ

Tata Sierra: ಹೊಸ ರೂಪದಲ್ಲಿ ಮರುಅವತಾರ, ಬೆಲೆ ಮತ್ತು ವೈಶಿಷ್ಟ್ಯ

- Advertisement -
- Advertisement -


ಟಾಟಾ ಸಿಯೆರಾ (Tata Sierra) 1991 ರಿಂದ 2003ರವರೆಗೆ ದೇಶಾದ್ಯಾಂತ ಪ್ರಸಿದ್ಧ SUV ಆಗಿತ್ತು. ಈಗ, ಟಾಟಾ ಕಂಪನಿಯು ಸಿಯೆರಾ ಕಾರನ್ನು ಹೊಸ ರೂಪದಲ್ಲಿ ಮಾರುಕಟ್ಟೆಗೆ ತರುವ ತಯಾರಿ ಮಾಡುತ್ತಿದೆ.

ವಿನ್ಯಾಸ (Design): ಟಾಟಾ ಸಿಯೆರಾ ನೂತನ ವಿನ್ಯಾಸದಲ್ಲಿ ಬಹುಮಟ್ಟಿಗೆ ಆಧುನಿಕ ಆಗಿದೆ. ಇದರ ಹೊರಭಾಗದಲ್ಲಿ ಎಲ್‌ಇಡಿ headlamps, ಫ್ಲಷ್-ಫಿಟ್ಟಿಂಗ್ ಡೋರ್ handles, ಡುಯಲ್ ಟೋನ್ ಅಲಾಯ್ ವೀಲ್ ಗಳು ಬಾಡಿ ಕಲರ್ ಬಿ-ಪಿಲ್ಲರ್ ಗಳು ಮತ್ತು ಕನೆಕ್ಟೆಡ್ LED ಲೈಟ್ ಸೆಟ್‌ಅಪ್ ಒಳಗೊಂಡಿವೆ.

ಕಾರ್ಯಕ್ಷಮತೆ (Performance): ಟಾಟಾ ಸಿಯೆರಾ ಕಾರು ಇಂಧನ (ಪೆಟ್ರೋಲ್/ಡೀಸೆಲ್) ಮತ್ತು ಎಲೆಕ್ಟ್ರಿಕ್ ಆಯ್ಕೆಯಲ್ಲಿ ಲಭ್ಯವಾಗಬಹುದು. ಇಂಧನ ಚಾಲಿತ ಮಾದರಿಯಲ್ಲಿ 1.5-ಲೀ. ಟರ್ಬೋ ಪೆಟ್ರೋಲ್ ಮತ್ತು 2-ಲೀ. ಡೀಸೆಲ್ ಎಂಜಿನ್‌ಗಳ ಆಯ್ಕೆ ಇರಲಿದೆ. ಈ ಕಾರು 18-20 ಕೆಎಂಪಿಎಲ್ ಮೈಲೇಜ್ ನೀಡಬಹುದು. ಎಲೆಕ್ಟ್ರಿಕ್ ಮಾದರಿಯಲ್ಲಿ 500 ಕಿಲೋಮೀಟರ್‌ವರೆಗೆ ರೇಂಜ್ ದೊರಕಬಹುದು.

ವೈಶಿಷ್ಟ್ಯಗಳು (Features): ಟಾಟಾ ಸಿಯೆರಾ SUVಯಲ್ಲಿ 3 ಸ್ಕ್ರೀನ್ ಸೆಟಪ್, 4 ಸ್ಪೋಕ್ ಸ್ಟೀರಿಂಗ್ ವೀಲ್, ಪನೋರಮಿಕ್ ಸನ್ರೂಫ್, ಪ್ರೀಮಿಯಂ ಸೌಂಡ್ ಸಿಸ್ಟಮ್, ವೈರ್‌ಲೆಸ್ ಫೋನ್ ಚಾರ್ಜರ್, ಡುಯಲ್ ಝೋನ್ ಕ್ಲೈಮೇಟ್ ಕಂಟ್ರೋಲ್ ಮತ್ತು ಹಲವಾರು ಇತರ ವೈಶಿಷ್ಟ್ಯಗಳಿವೆ.

ಸುರಕ್ಷತಾ ವೈಶಿಷ್ಟ್ಯಗಳು (Safety features): ಈ ಕಾರಿನಲ್ಲಿ 6 airbags, ESP, ಟಿಪಿಎಂಎಸ್, ಎಡಿಎಎಸ್ ಮತ್ತು 360-ಡಿಗ್ರಿ ಕ್ಯಾಮೆರಾ ಸಿಸ್ಟಮ್ ಇದ್ದು, ಸುರಕ್ಷತೆಯ ದೃಷ್ಟಿಯಿಂದ ಉತ್ತಮವಾಗಿ ವಿನ್ಯಾಸಗೊಳಿಸಲಾಗಿದೆ.

ಬೆಲೆ & ಪ್ರತಿಸ್ಪರ್ಧಿಗಳು (Price & Competitors): ಟಾಟಾ ಸಿಯೆರಾ ಎಸ್ಯುವಿಯ ಇಂಧನ ಚಾಲಿತ ಮಾದರಿಯ ಬೆಲೆ ಸುಮಾರು ರೂ.10.50 ಲಕ್ಷ ಮತ್ತು ಎಲೆಕ್ಟ್ರಿಕ್ ಮಾದರಿಯ ಬೆಲೆ ರೂ.25 ಲಕ್ಷ (ಎಕ್ಸ್-ಶೋರೂಂ) ಇರಬಹುದು. ಮಹೀಂದ್ರಾ ಥಾರ್, ಟಾಟಾ ಹ್ಯಾರಿಯರ್ ಮತ್ತು ಟಾಟಾ ಕರ್ವ್ ಇವು ಪ್ರಬಲ ಪ್ರತಿಸ್ಪರ್ಧಿಗಳಾಗಿವೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page