Bengaluru: ಟ್ಯಾಟೂ (Tattoo) ಪ್ರಿಯರಿಗೆ ರಾಜ್ಯ ಆರೋಗ್ಯ ಇಲಾಖೆ ಶಾಕ್ ನೀಡಿದ್ದು, ಟ್ಯಾಟೂ ಸಂಬಂಧಿತ ಹೊಸ ನಿಯಮ ಜಾರಿಗೆ ತರಲು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಅಸ್ಥಿರವಾಗಿ ಟ್ಯಾಟೂ ಹಾಕಿಸುವ ಹಾಗೂ ಹಾಕುವವರ ಮೇಲೆ ನಿಯಂತ್ರಣ ಹೇರುವ ಕಾನೂನು ತರಲು ಸರ್ಕಾರ ಪ್ಲಾನ್ ಮಾಡಿದೆ.
ಭಾರತದಲ್ಲಿ ಟ್ಯಾಟೂಗೆ ಸಂಬಂಧಿಸಿದ ಯಾವುದೇ ನಿಖರ ನಿಯಮಗಳಿಲ್ಲ. ರಾಜ್ಯ ಸರ್ಕಾರ ಮೊತ್ತಮೊದಲಾಗಿ ಟ್ಯಾಟೂ ಪ್ರಕ್ರಿಯೆಗೆ ನಿಯಂತ್ರಣ ತರಲು ನಿರ್ಧರಿಸಿದೆ. ಟ್ಯಾಟೂ ಹಾಕಿಸಿಕೊಳ್ಳುವವರು ವೈದ್ಯರ ಪರಿಶೀಲನಾ ಪ್ರಮಾಣಪತ್ರ ಪಡೆಯುವುದು ಕಡ್ಡಾಯ. ಹಾಗೆಯೇ, ಟ್ಯಾಟೂ ಕಲಾವಿದರು ಬಳಸುವ ಬಣ್ಣ, ರಸಾಯನಿಕಗಳು, ಸೂಜಿಗಳ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು.
ಚರ್ಮ ಕ್ಯಾನ್ಸರ್, ಹೆಚ್ಐವಿ, ಹೆಪಟೈಟಿಸ್ ಬಿ, ಹೆಪಟೈಟಿಸ್ ಸಿ, ಮತ್ತು ಇತರ ಗಂಭೀರ ಸೋಂಕುಗಳು ಟ್ಯಾಟೂ ಮೂಲಕ ಹರಡುವ ಸಾಧ್ಯತೆ ಇದೆ. ಆರೋಗ್ಯ ಇಲಾಖೆಯ ಅಧ್ಯಯನದ ಪ್ರಕಾರ, ಅಸ್ವಚ್ಛ ಪರಿಸರದಲ್ಲಿ ಟ್ಯಾಟೂ ಮಾಡಿಸುವುದು ಈ ಸೋಂಕುಗಳಿಗೆ ಕಾರಣವಾಗುತ್ತಿದೆ. ಈ ಕಾರಣದಿಂದ, ಸರ್ಕಾರ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ.