New Delhi: ಮಧ್ಯಮ ವರ್ಗದವರ ಮೇಲೆ ತೆರಿಗೆ burden ಕಡಿಮೆ ಮಾಡಿ, ಅವರ ಖರೀದಿಸುವ ಸಾಮರ್ಥ್ಯವನ್ನು ಹೆಚ್ಚಿಸಲು ಕೇಂದ್ರ ಸರ್ಕಾರ 15 ಲಕ್ಷ ರೂ.ವರೆಗೆ ಆದಾಯದ ಮೇಲೆ ತೆರಿಗೆ ವಿನಾಯಿತಿ (Tax exemption) ನೀಡಲು ಯೋಚನೆ ಮಾಡುತ್ತಿದೆ ಎಂದು ವರದಿಗಳು ಹೇಳಿವೆ. ಈ ಕುರಿತು ಅಧಿಕೃತ ಘೋಷಣೆಯನ್ನು ಮುಂದಿನ ವರ್ಷದ ಫೆ.1ರಂದು ಮಂಡಿಸಲಾದ ಬಜೆಟ್‌ನಲ್ಲಿ ಮಾಡಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.
2020ರಲ್ಲಿ ಹೊಸ ತೆರಿಗೆ ಪದ್ಧತಿ ಜಾರಿಯಾಗುವ ಮುನ್ನ, ತೆರಿಗೆ ಪಾವತಿದಾರರಿಗೆ ಮನೆ ಬಾಡಿಗೆ, ವಿಮೆ ಪ್ರೀಮಿಯಂ ಮುಂತಾದ ವೆಚ್ಚಗಳಿಗೆ ವಿನಾಯಿತಿ ನೀಡಲಾಗುತ್ತಿತ್ತು. ಆದರೆ ತೆರಿಗೆ ದರ ಜಾಸ್ತಿ ಇತ್ತು. 2020ರಲ್ಲಿ ಜಾರಿಗೊಂಡ ಹೊಸ ಪದ್ಧತಿಯಲ್ಲಿ ತೆರಿಗೆ ದರ ಕಡಿಮೆ ಮಾಡಲಾಗಿದೆ, ಆದರೆ ಇಂತಹ ವಿನಾಯಿತಿಗಳು ತೆಗೆದುಹಾಕಲ್ಪಟ್ಟವು.
ಹೀಗಾಗಿ, ಆದರೆ ಆದಾಯ ತೆರಿಗೆ ಪಾವತಿ ಮಿತಿ ಹೆಚ್ಚಿಸಿದರೆ, 2020ರಲ್ಲಿ ಪರಿಚಯಿಸಿದ ಹೊಸ ಪದ್ಧತಿಯು ದೊಡ್ಡ ಮಟ್ಟದಲ್ಲಿ ಮಧ್ಯಮ ವರ್ಗದ ಜನರಿಗೆ ಸಹಾಯ ಮಾಡಲಿದೆ. ಈ ಯೋಜನೆಯಲ್ಲಿ ಪ್ರಸ್ತುತ 3 ಲಕ್ಷದಿಂದ 15 ಲಕ್ಷ ರೂ.ವರೆಗೆ ಆದಾಯಕ್ಕೆ 5% ರಿಂದ 20% ತನಕ ತೆರಿಗೆ ವಿಧಿಸಲಾಗುತ್ತಿದೆ. ಅದಕ್ಕೆ ಮೇಲಿನ ಆದಾಯದ ಮೇಲೆ 30% ತೆರಿಗೆ ವಿಧಿಸಲಾಗುತ್ತದೆ.