Home News Thalapathy Vijay ರಾಜಕೀಯ ರ‍್ಯಾಲಿ

Thalapathy Vijay ರಾಜಕೀಯ ರ‍್ಯಾಲಿ

127
Tamilaga Vettri Kazhagam Talapathy Vijay Political Rally

ದಳಪತಿ ವಿಜಯ್(Thalapathy Vijay) ಅವರು ಸಿನಿಮಾ ರಂಗ (film industry) ತೊರೆಯಲು ರೆಡಿ ಆಗಿದ್ದಾರೆ. ಅವರು ‘ತಮಿಳಗ ವೆಟ್ರಿ ಕಳಗಮ್’ (Tamilaga Vettri Kazhagam-YVK) ಪಕ್ಷ ಲಾಂಚ್ ಮಾಡಿದ್ದು ರ‍್ಯಾಲಿ ನಡೆಸಿದ್ದಾರೆ. ಇದು ಪಕ್ಷದ ಮೊದಲ ರ‍್ಯಾಲಿ(rally) ಆಗಿತ್ತು. ಈ ರ‍್ಯಾಲಿಯಲ್ಲಿ ಲಕ್ಷಾಂತರ ಮಂದಿ ಆಗಮಿಸಿದ್ದರು. ಅವರ ಎದುರು ವಿಜಯ್ ಅವರು ಮಾತನಾಡಿದ್ದಾರೆ. ಈ ವೇಳೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ.

ವಿಜಯ್ ಅವರ ವೃತ್ತಿ ಜೀವನ ಉತ್ತುಂಗದಲ್ಲಿ ಇದೆ. ಅವರು ಪ್ರತಿ ಸಿನಿಮಾಗೆ ನೂರಾರು ಕೋಟಿ ರೂಪಾಯಿ ಪಡೆಯುತ್ತಾರೆ. ಹೀಗಿರುವಾಗಲೇ ಅವರು ಚಿತ್ರರಂಗ ತೊರೆಯುವ ನಿರ್ಧಾರ ಮಾಡಿದರು. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ನಾನು ನನ್ನ ವೃತ್ತಿ ಜೀವನ ಉತ್ತುಂಗದಲ್ಲಿರುವಾಗ ತೊರೆದೆ. ನನ್ನ ಸಂಪಾದನೆ ತೊರೆದೆ. ನಿಮ್ಮ ವಿಜಯ್ ಆಗಿ ಇಲ್ಲಿದ್ದೇನೆ. ನಿಮ್ಮನ್ನು ನಂಬಿ ಬಂದಿದ್ದೇನೆ’ ಎಂದರು ಅವರು.

ಚೆನ್ನೈನಿಂದ ನೂರು ಕಿಲೋ ಮೀಟರ್ ದೂರದಲ್ಲಿರುವ ವಿಲ್ಲುಪುರಂನಲ್ಲಿ ಈ ರ‍್ಯಾಲಿ ನಡೆದಿದೆ. ಸುಮಾರು ಐದರಿಂದ ಆರು ಲಕ್ಷ ಮಂದಿ ರ‍್ಯಾಲಿಯಲ್ಲಿ ಭಾಗವಹಿಸಿದ್ದರು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page