Ranchi (Jharkhand): ಇಂದು ಬೆಳಗ್ಗೆ ಗುಮ್ಲಾ ಜಿಲ್ಲೆಯ ಕೆಚಕಿ ಗ್ರಾಮದ ಅರಣ್ಯದಲ್ಲಿ ನಕ್ಸಲರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಗುಂಡಿನ ಚಕಮಕಿಯಾಗಿದೆ. ಈ ದಾಳಿಯಲ್ಲಿ ಮೂರು ನಕ್ಸಲರು ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಭದ್ರತಾ ಪಡೆ ಜಾರ್ಖಂಡ್ ಜನ ಮುಕ್ತಿ ಪರಿಷದ್ (ಜೆಜೆಎಂಪಿ) ಮಾವೋ ಗುಂಪಿನ ಸದಸ್ಯರು ಅರಣ್ಯದಲ್ಲಿರುವ ಬಗ್ಗೆ ಮಾಹಿತಿ ಪಡೆದಿದ್ದರು. ಬೆಳಿಗ್ಗೆ 8 ಗಂಟೆಗೆ ಶೋಧ ಕಾರ್ಯಾಚರಣೆ ನಡೆಯುತ್ತಿರೋದಾದರೂ, ನಕ್ಸಲರು ಭದ್ರತಾ ಸಿಬ್ಬಂದಿಗೆ ದಾಳಿ ಮಾಡಿದ್ದಾರೆ. ಭದ್ರತಾ ಪಡೆ ಪ್ರತಿಕ್ರಿಯೆ ನೀಡಿದ್ದು, ಮೂರು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಘಟನೆಯಲ್ಲಿ ಹತರಾದ ನಕ್ಸಲರು ಲೋಹರ್ದಗಾ ಜಿಲ್ಲೆಯ ಲಾಲು ಲೋಹ್ರಾ, ಸುಜಿತ್ ಒರಾನ್ ಮತ್ತು ಲತೇಹಾರ್ ಮೂಲದ ಚೋಟು ಒರಾನ್ ಎಂದು ಗುರುತಿಸಲಾಗಿದೆ.
ಈ ತಿಂಗಳ ಆರಂಭದಲ್ಲಿ ಹಜಾರಿಬಾಗ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೂರು ಪ್ರಮುಖ ನಕ್ಸಲರು ಹತರಾಗಿದ್ದರು. ಅವರಲ್ಲಿ ಒಬ್ಬರ ತಲೆಗೆ 1 ಕೋಟಿ ರೂ. ಬಹುಮಾನ ಘೋಷಿಸಲಾಗಿತ್ತು. ಸಾವನ್ನಪ್ಪಿದ ನಕ್ಸಲರಲ್ಲಿ ಕೇಂದ್ರ ಸಮಿತಿ ಸದಸ್ಯ ಸಹದೇವ್ ಸೊರೆನ್ ಇದ್ದರು.
ಕೇಂದ್ರ ಗೃಹ ಸಚಿವಾಲಯ, ಅಮಿತ್ ಶಾ ನೇತೃತ್ವದಲ್ಲಿ, 2026ರ ಮಾರ್ಚ್ ಒಳಗೆ ದೇಶವನ್ನು ನಕ್ಸಲ್ ಮುಕ್ತಗೊಳಿಸಲು ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಶರಣಾಗತ ನಕ್ಸಲರಿಗೆ ಪುನರ್ವಸತಿ ಸೌಲಭ್ಯವನ್ನು ನೀಡಲಾಗುತ್ತಿದೆ.







