Tiptur, Tumkur (Tumakuru) : ತಿಪಟೂರು ನಗರದ ಸಿಂಗ್ರಿ ನಂಜಪ್ಪ ವೃತ್ತದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದಿಂದ ತಿಪಟೂರನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸುವಂತೆ ಆಗ್ರಹಿಸಿ ಗುರುವಾರ ತುರುವೇಕೆರೆ ತಾಲ್ಲೂಕಿನ ಮಾಯಸಂದ್ರದಿಂದ ತಿಪಟೂರಿನವರೆಗೂ Bike Rally ಯಲ್ಲಿ ಬಂದು ತಾಲ್ಲೂಕು ಆಡಳಿತದ ಗ್ರೇಡ್ 2 ತಹಶೀಲ್ದಾರ್ ಜಗನ್ನಾಥ್ ಮೂಲಕ ರಾಜ್ಯಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಏಷ್ಯಾದಲ್ಲಿಯೇ ಅತಿ ದೊಡ್ಡ ಕೊಬ್ಬರಿ ಮಾರುಕಟ್ಟೆ ಹೊಂದಿರುವ ತಿಪಟೂರು ನಗರ ಭೌಗೋಳಿಕವಾಗಿ ತುಮಕೂರಿನಿಂದ ಬಹು ದೂರದಲ್ಲಿದೆ. ತಿಪಟೂರನ್ನು ಕೇಂದ್ರವನ್ನಾಗಿಸಿಕೊಂಡು ಕಲ್ಪತರು ಜಿಲ್ಲೆ ಮಾಡಬೇಕು. 1983-84ರಲ್ಲಿ ತುರುವೇಕೆರೆಯ ಶಾಸಕ ಮಹಲಿಂಗಪ್ಪ ಅವರು ವಿಧಾನಸೌಧದಲ್ಲಿ ಅಂದೇ ತಿಪಟೂರನ್ನು ಜಿಲ್ಲೆಯನ್ನಾಗಿಸಬೇಕು ಎಂದು ಒತ್ತಾಯಿಸಿದ್ದರು. ಆದ್ದರಿಂದ ಈ ಬಾರಿಯ ಬಜೆಟ್‍ನಲ್ಲಿ ತಿಪಟೂರು ಕೇಂದ್ರವನ್ನು ಜಿಲ್ಲೆಯನ್ನಾಗಿ ಘೋಷಿಸಬೇಕು ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಗಂಗಾಧರ್ ಕರೀಕೆರೆ ತಿಳಿಸಿದರು.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ತಾಲ್ಲೂಕು ಘಟಕದ ಅಧ್ಯಕ್ಷ ರಾಮ್ ಪ್ರಸಾದ್, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ತುರುವೇಕೆರೆ ತಾಲ್ಲೂಕು ಘಟಕದ ಅಧ್ಯಕ್ಷೆ ಗಂಗಾರಾಣಿ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಕಾರ್ಯದರ್ಶಿಗಳಾದ ಕೆ.ಸತೀಶ್, ಗಂಗಾಧರ್, ಮಹದೇವಯ್ಯ, ಶಾಂತ ಕುಮಾರ್, ಮೋಹನ್, ರೋಹನ್, ರುದ್ರಾರಾಧ್ಯ, ಎ.ಎನ್.ಕೆಂಪರಾಜು, ಮಂಜುನಾಥ್, ಬಸವರಾಜು, ಮತ್ತೀಹಳ್ಳಿ ಶಿವಕುಮಾರ್, ಬೋರಮ್ಮ, ನಾಗಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಿದರು.