Hoskote, Bengaluru Rural : Covid-19 ಶಿಷ್ಟಾಚಾರದಂತೆ ಹೊಸಕೋಟೆ ಆರೋಗ್ಯ ಅಧಿಕಾರಿಗಳ ಕಚೇರಿಯಲ್ಲಿ ಕ್ಷಯ ರೋಗಿಗಳ ದತ್ತು ಸ್ವೀಕಾರ (Tuberculosis Patients Adoption) ಕಾರ್ಯಕ್ರಮ ಸರಳವಾಗಿ ನಡೆಯಿತು.
ಹೊಸಕೋಟೆ ತಾಲ್ಲೂಕಿನಲ್ಲಿ 111 ಸಕ್ರಿಯ ಕ್ಷಯರೋಗ ಪ್ರಕರಣಗಳಿದ್ದು, ಇವರಲ್ಲಿ ಆರ್ಥಿಕವಾಗಿ ಹಿಂದುಳಿದ ಕ್ಷಯ ರೋಗಿಗಳನ್ನು ಗುರುತಿಸಿ, ತಿಂಗಳಿಗೆ ಅಗತ್ಯವಿರುವಷ್ಟು ದಿನಸಿ ಪದಾರ್ಥಗಳನ್ನು ದಾನಿಗಳಿಂದ ಕೊಡಿಸಿ, ಅವರ ಮುಂದಿನ ಆರು ತಿಂಗಳ ಚಿಕಿತ್ಸಾ ಮೇಲ್ವಿಚಾರಣೆಯ ಸಂಪೂರ್ಣ ಜವಾಬ್ದಾರಿಯನ್ನು ದಾನಿಗಳಿಗೆ ನೀಡುವ ವಿಶೇಷ ಕಾರ್ಯಕ್ರಮವೇ ದತ್ತು ಸ್ವೀಕಾರ ಕಾರ್ಯಕ್ರಮ ಎಂದು ಜಿಲ್ಲಾ ಕ್ಷಯರೋಗ ನಿಯಂತ್ರಣ ಅಧಿಕಾರಿ ಡಾ.ನಾಗೇಶ್ ತಿಳಿಸಿದರು.
TAPCMS ಹೊಸಕೋಟೆಯ ಅಧ್ಯಕ್ಷ ಮಂಜುನಾಥ್ ” ದಾನಿಗಳಾದ ಡಾ.ಧರ್ಮೇಂದ್ರ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆ, ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಗುರುರಾಜ್, ಸಾರ್ವಜನಿಕ ಆಸ್ಪತ್ರೆ ಶುಶ್ರೂಷಕ ಅಧಿಕಾರಿಯಾದ ರಮೇಶ್ , ಶೈಲಶ್ರೀ ಮಹೇಶ್ ಸೂಲಿಬೆಲೆ,, ಹೋಟೆಲ್ ವ್ಯಾಪಾರಿ ಕೃಷ್ಣಮೂರ್ತಿ ಅವರನ್ನು ಸನ್ಮಾನಿಸಿದರು.
ಜಿಲ್ಲಾ ಕ್ಷಯರೋಗ ಘಟಕದ ಮುಖ್ಯಸ್ಥರಾದ ಸಿದ್ದರಾಜು, ಆರೋಗ್ಯ ಸುರಕ್ಷಾ ಅಧಿಕಾರಿ ಲತಾ, ವ್ಯವಸ್ಥಾಪಕರಾದ ಶೈಲಜಾ, ತಾಲ್ಲೂಕು ಕ್ಷಯರೋಗ ಕಾರ್ಯಕ್ರಮದ ಮೇಲ್ವಿಚಾರಕ ಸುದೀಪ್, ಚಂದ್ರಶೇಖರ್, ಮುರುಳಿ, ಆಪ್ತ ಸಮಾಲೋಚಕರಾದ ಮಂಗಳ, ಹಾಗೂ ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.