Tumakuru : ಪಟ್ಟನಾಯಕನಹಳ್ಳಿ ಗುರುಗುಂಡ ಬ್ರಹ್ಮೇಶ್ವರಸ್ವಾಮಿ ಮಹಾಸಂಸ್ಥಾನ ಮಠದ (Sri Gurugunda Brahmeshwara Swami Mutt) ವತಿಯಿಂದ ನಡೆದ ಜಾತ್ರಾ ಮಹೋತ್ಸವಕ್ಕೆ ಕೊರೊನಾ ಹಿನ್ನೆಲೆಯಲ್ಲಿ ತಾಲ್ಲೂಕು ಆಡಳಿತ ಅನುಮತಿ ನೀಡಲು ನಿರಾಕರಿಸಿದರಿಂದ ಕ್ರೇನ್ ಮೂಲಕ ಓಂಕಾರೇಶ್ವರ ಸ್ವಾಮಿ (Omkareshwara Swamy Rathotsava) ಕಲ್ಲು ಗಾಲಿ ರಥವನ್ನು ಎಳೆದು ಸರಳವಾಗಿ ಜಾತ್ರಾ ಮಹೋತ್ಸವ ಆಚರಿಸಲಾಯಿತು.
ಮಧ್ಯಾಹ್ನ 2.25ಕ್ಕೆ ರಥೋತ್ಸವಕ್ಕೆ ಈಡುಗಾಯಿ ಹಾಕುವ ಮೂಲಕ ಮಠದ ಪೀಠಾಧ್ಯಕ್ಷ ನಂಜಾವಧೂತ ಸ್ವಾಮೀಜಿ ಚಾಲನೆ ನೀಡಿದರು.
ರಥೋತ್ಸವ ಮುಗಿದ ಬಳಿಕ ರಥ ನಿಂತ ಬಂಗಿಯನ್ನು ನೋಡಿ ಜನರು ಈ ವರ್ಷದ ಮಳೆ ಬೆಳೆ ಕುರಿತು ರಾಜ್ಯ ಹಾಗೂ ದೇಶದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಭವಿಷ್ಯ ಅಂದಾಜಿಸುವ ಪ್ರತೀತಿಯಿದೆ.
ಮಾಜಿ ಸಚಿವ ಟಿ.ಬಿ.ಜಯಚಂದ್ರ, ರೇಷ್ಮೆ ನಿಗಮ ಮಂಡಳಿ ಅಧ್ಯಕ್ಷ ಎಸ್.ಅರ್.ಗೌಡ, ಮುಖಂಡ ಕಲ್ಕೆರೆ ರವಿಕುಮಾರ್, ರಂಗನಾಥಗೌಡ, ಕೊಟ್ಟ ಶಂಕರ್, ಕ್ಯಾದಿಗುಂಟೆ ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.