44 ಶತಕೋಟಿ ಅಮೆರಿಕನ್ ಡಾಲರ್ (Billion Dollars) ಮೌಲ್ಯದ Twitter ಖರೀದಿ ಒಪ್ಪಂದದಿಂದ Tesla ಮತ್ತು SpaceX Elon Musk ಮಸ್ಕ್ ಹಿಂದೆ ಸರಿಯುವ ನಿರ್ಧಾರ ಮಾಡಿದ್ದಾರೆ.
Twitter ನಕಲಿ ಖಾತೆಗಳ ಕುರಿತು ಸಂಪೂರ್ಣ ಮಾಹಿತಿ ಬಹಿರಂಗಪಡಿಸಿಲ್ಲ ಮತ್ತು ಖರೀದಿಯ ಒಪ್ಪಂದದ ಹಲವಾರು ನಿಬಂಧನೆಗಳನ್ನು Twitter ಉಲ್ಲಂಘಿಸಿದೆ ಎಂದು ಆರೋಪಿಸಿ Musk ಒಪ್ಪಂದವನ್ನು ಕೈಬಿಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ ಟ್ವಿಟರ್, Elon Musk ವಿರುದ್ಧ ಮೊಕದ್ದಮೆ ಹೂಡಲು ನಿರ್ಧರಿಸಿದೆ. Twitter ನ ಅಧ್ಯಕ್ಷ ಬ್ರೆಟ್ ಟೇಲರ್ (Bret Taylor) ಮಾತನಾಡಿ, “ಟ್ವಿಟರ್ ಮಂಡಳಿ ನಿಯಮಗಳ ಪ್ರಕಾರ ಮಸ್ಕ್‌ನೊಂದಿಗಿನ ಒಪ್ಪಂದವನ್ನು ಅಂತ್ಯಗೊಳಿಸಲು ಬದ್ಧವಾಗಿದೆ. ಹಿಂದಿನ ಒಪ್ಪಂದದ ಪ್ರಕಾರ ಮುಂದೇನಾದರೂ ಖರೀದಿ ಪ್ರಕ್ರಿಯೆ ರದ್ದಾದಲ್ಲಿ 1 Billion Dollars ವಿರಾಮ ಶುಲ್ಕ ನೀಡಬೇಕು. ಅದರ ಆಧಾರದ ಮೇಲೆ ಮಸ್ಕ್ ವಿರುದ್ಧ ಟ್ವಿಟ್ಟರ್ ದಾವೆ ಹೂಡಲಿದೆ”. ಎಂದು ಹೇಳಿದ್ದಾರೆ.
ಕಳೆದ ಏಪ್ರಿಲ್‌ನಲ್ಲಿ 44 ಬಿಲಿಯನ್ ಡಾಲರ್ ಮೊತ್ತದಲ್ಲಿ ಟ್ವಿಟ್ಟರ್ ಅನ್ನು ಖರೀದಿಸುವ ಪ್ರಸ್ತಾಪವನ್ನು ಮಸ್ಕ್ ಮುಂದಿಟ್ಟಿದ್ದರು. ಆದರೆ ಕಳೆದ ಮೇ ತಿಂಗಳಲ್ಲಿ ಟ್ವಿಟರ್ ಸ್ಪ್ಯಾಮ್ ಮತ್ತು ನಕಲಿ ಖಾತೆಗಳ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡುತ್ತಿಲ್ಲ ಮತ್ತು ತಾತ್ಕಾಲಿಕವಾಗಿ ಒಪ್ಪಂದವನ್ನು ಸ್ಥಗಿತಗೊಳಿಸುತ್ತಿದೆ ಎಂದು ಮಸ್ಕ್ ಘೋಷಿಸಿದ್ದರು.