back to top
26.3 C
Bengaluru
Friday, July 18, 2025
HomeIndiaChhattisgarh ದಲ್ಲಿ ಎರಡು Encounters– 22 ನಕ್ಸಲರ ಹತ್ಯೆ

Chhattisgarh ದಲ್ಲಿ ಎರಡು Encounters– 22 ನಕ್ಸಲರ ಹತ್ಯೆ

- Advertisement -
- Advertisement -

Chhattisgarh: ಭದ್ರತಾ ಪಡೆಗಳು ಇಂದು ಬಿಜಾಪುರ ಹಾಗೂ ಕಾಂಕೇರ್ ಜಿಲ್ಲೆಯಲ್ಲಿ ನಡೆದ ಎರಡು ಪ್ರತ್ಯೇಕ encounter ಗಳಲ್ಲಿ 22 ನಕ್ಸಲರನ್ನು (Naxals) ಹತ್ಯೆ ಮಾಡಿದ್ದಾರೆ. ಬೆಳಿಗ್ಗೆ 7 ಗಂಟೆಯಿಂದ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿಯಾಗಿದೆ. encounter ಸ್ಥಳದಿಂದ 22 ನಕ್ಸಲರ ಮೃತದೇಹಗಳು ಹಾಗೂ ಹೆಚ್ಚಿನ ಪ್ರಮಾಣದ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಬಿಜಾಪುರ ಡಿಆರ್ಜಿಯ ಒಬ್ಬ ಸೈನಿಕ ಹುತಾತ್ಮರಾಗಿದ್ದಾರೆ.

encounter ಬಳಿಕ ಎಕೆ-47, ಎಸ್ಎಲ್ಆರ್ ಮುಂತಾದ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ನಕ್ಸಲೈಟ್ ಕಮಾಂಡರ್ ಪಾಪ ರಾವ್ ಈ ಪ್ರದೇಶದಲ್ಲಿ ಸಕ್ರಿಯನಾಗಿದ್ದಾನೆ. ಸೈನಿಕರು ಸುಮಾರು 40-45 ನಕ್ಸಲರನ್ನು ಸುತ್ತುವರಿದು ಕಾರ್ಯಾಚರಣೆ ನಡೆಸಿದ್ದಾರೆ.

ಬಿಜಾಪುರದ ಗಂಗಲೂರಿನಲ್ಲಿ ನಡೆದ encounter ಕುರಿತು ಗೃಹ ಸಚಿವ ವಿಜಯ್ ಶರ್ಮಾ ಮಾತನಾಡಿದ್ದು, “22 ನಕ್ಸಲರನ್ನು ಹತ್ಯೆ ಮಾಡಲಾಗಿದೆ. ಈ ಕಾರ್ಯಾಚರಣೆಯಲ್ಲಿ ಒಬ್ಬ ಸೈನಿಕ ಹುತಾತ್ಮನಾಗಿದ್ದಾನೆ. ನಮ್ಮ ಸರ್ಕಾರ ಹುತಾತ್ಮ ಯೋಧನ ಕುಟುಂಬದೊಂದಿಗೆ ನಿಂತಿದೆ. ಸೈನಿಕರ ಸಾಹಸದ ಬಲದಿಂದ ಕಾರ್ಯಾಚರಣೆ ಯಶಸ್ವಿಯಾಗಿದೆ” ಎಂದು ತಿಳಿಸಿದ್ದಾರೆ.

ಕಾಂಕೇರ್-ನಾರಾಯಣಪುರ ಗಡಿ ಪ್ರದೇಶದಲ್ಲಿ ನಕ್ಸಲರ ಚಲನೆ ಬಗ್ಗೆ ಮಾಹಿತಿ ಪಡೆದ ಬಳಿಕ, ಜಂಟಿ ಪೊಲೀಸ್ ಪಡೆ ಶೋಧ ಕಾರ್ಯಾಚರಣೆ ನಡೆಸಿತು. ಈ ಸಂದರ್ಭ ಡಿಆರ್ಜಿ/ಬಿಎಸ್ಎಫ್ ತಂಡ ಮತ್ತು ನಕ್ಸಲರ ನಡುವೆ ಗುಂಡಿನ ಚಕಮಕಿಯಾಯಿತು.

ಕಳೆದ ತಿಂಗಳು ಬಿಜಾಪುರದಲ್ಲಿಯೂ ಭಾರಿ ಎನ್ಕೌಂಟರ್ ನಡೆದಿದ್ದು, 31 ನಕ್ಸಲರು ಹತ್ಯೆಯಾಗಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page