Bengaluru: ನಾವು ಪ್ರತಿದಿನ ಬಳಸುವ ಕುಡಿಯುವ ನೀರಿನಲ್ಲಿಯೂ ಅಪಾಯ (Unsafe Water Bottle) ಇದೆ ಎಂಬುದನ್ನು ಆಹಾರ ಇಲಾಖೆಯ (Food Department) ಪರೀಕ್ಷಾ ವರದಿ ಸ್ಪಷ್ಟಪಡಿಸಿದೆ. ಬಾಟಲ್‌ನಲ್ಲಿ ಪೂರೈಕೆ ಆಗುವ ನೀರಿನಲ್ಲಿ ಶೇಕಡಾ 50ರಷ್ಟು ಕಳಪೆ ಇದೆ ಎಂದು ವರದಿ ಹೇಳಿದೆ. ಹಲವು ಕಂಪನಿಗಳ ವಾಟರ್ ಬಾಟಲ್‌ಗಳು ಸುರಕ್ಷಿತವಲ್ಲ. ಇದಲ್ಲದೆ, ಈ ನೀರಿನಲ್ಲಿ ಅಗತ್ಯವಿರುವ ಮಿನರಲ್‌ಗಳು ಕೂಡ ಇಲ್ಲದಿರುವುದು ಪತ್ತೆಯಾಗಿದೆ.
ಮತ್ತೊಂದೆಡೆ, ಸಿಹಿ ತಿಂಡಿಗಳಿಗೆ ಬಳಸುವ ಕೋವಾದಲ್ಲಿಯೂ ಕಲಬೆರಕೆ ಕಂಡುಬಂದಿದೆ. ಈ ಹಿಂದೆ ಪನೀರ್‌ನಲ್ಲೂ ಕೃತಕ ರಾಸಾಯನಿಕಗಳು ಪತ್ತೆಯಾಗಿದ್ದವು. ಈಗ ಕೋವಾದು ಕೂಡ ಆರೋಗ್ಯಕ್ಕೆ ಮಾರಕ ಎಂಬುದು ದೃಢಪಟ್ಟಿದೆ.
ಪನೀರ್, ಐಸ್ ಕ್ರೀಮ್, ಇಡ್ಲಿ, ಗೋಬಿ ಮೊದಲಾದ ಆಹಾರಗಳಲ್ಲಿ ಹಾನಿಕಾರಕ ಅಂಶ ಪತ್ತೆಯಾಗುತ್ತಿದ್ದಂತೆ ಆಹಾರ ಇಲಾಖೆ ತೀವ್ರ ಕ್ರಮ ಕೈಗೊಂಡಿದೆ. ಹಲವು ಕಡೆಗಳಿಂದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆ ನಡೆಸಲಾಗುತ್ತಿದೆ. ಮಾರಾಟ ಮತ್ತು ತಯಾರಿಕೆಗೆ ಹೊಸ ನಿಯಮಗಳನ್ನು ಜಾರಿಗೊಳಿಸಲಾಗಿದೆ.
ಇಷ್ಟು ಅಂಶಗಳು ಬೆಳಕಿಗೆ ಬಂದಿರುವ ಹಿನ್ನೆಲೆಯಲ್ಲಿ, ಈಗ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲದ ವಿಷಯವಾಗಿದೆ. ಸಾರ್ವಜನಿಕರ ಆರೋಗ್ಯದ ರಕ್ಷಣೆಗೆ ಸರಿಯಾದ ಕ್ರಮ ತೆಗೆದುಕೊಳ್ಳಬೇಕೆಂಬ ಒತ್ತಾಯ ಹೆಚ್ಚಾಗಿದೆ.