ಭಾರತೀಯ ಷೇರು ಮಾರುಕಟ್ಟೆಯು ಗುರುವಾರ ರಾಕೆಟ್ ವೇಗದಲ್ಲಿ ದಾಖಲೆಯ ಜಿಗಿತ ಕಂಡಿದೆ. U.S Fedaral reserve 50 ಬೇಸಿಸ್ ಪಾಯಿಂಟ್ ಬಡ್ಡಿ ದರ ಕಡಿತದ ನಿರ್ಧಾರವನ್ನು ಹೂಡಿಕೆದಾರರು ಸ್ವಾಗತಿಸಿದ್ದು Sensex ಮತ್ತು Nifty ಹೊಸ ದಾಖಲೆಯ ಮಟ್ಟ ತಲುಪಿದೆ.
ಬೆಳಿಗ್ಗೆ 9.45ಕ್ಕೆ ಸೆನ್ಸೆಕ್ಸ್ 820 ಪಾಯಿಂಟ್ಸ್ ಅಥವಾ 1% ಏರಿಕೆ, 83,769 ಮಾರ್ಕ್ ತಲುಪಿದೆ. ನಿಫ್ಟಿ 231 ಪಾಯಿಂಟ್ಸ್ ಹೆಚ್ಚಾಗಿ 25,609 ಮಾರ್ಕ್‌ನಲ್ಲಿ ವಹಿವಾಟು ನಡೆಸಿತ್ತು. ದಿನದ ವಹಿವಾಟಿನಲ್ಲಿ 1854 ಷೇರುಗಳು ಏರಿಕೆಗೊಂಡಿದ್ದು, 1134 ಷೇರುಗಳು ಕುಸಿದಿವೆ ಮತ್ತು 129 ಷೇರುಗಳ ಮೌಲ್ಯದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ.
ಜಾಗತಿಕ ಮಾರುಕಟ್ಟೆಯಲ್ಲೂ ಪಾಸಿಟಿವ್ ಸೂಚನೆ ಕಂಡುಬಂದ ಪರಿಣಾಮ, BSC Midcap ಮತ್ತು Small cap ಸೂಚ್ಯಂಕದಲ್ಲೂ ಅರ್ಧ ಪರ್ಸೆಂಟ್‌ಗೂ ಹೆಚ್ಚು ಏರಿಕೆ ಕಂಡುಬಂದಿದೆ.
Top Gainers ಮತ್ತು Top Losers – ಗ್ರೇಸಿಯಂ, (Bajaj auto) ಬಜಾಜ್ ಆಟೋ, (Axis Bank) ಆಕ್ಸಿಸ್ ಬ್ಯಾಂಕ್, ಎಲ್‌ಟಿಐ ಮೈಂಡ್‌ಟ್ರೀ ಮತ್ತು ಎನ್‌ಟಪಿಸಿ ನಿಫ್ಟಿ 50 ಟಾಪ್ ಗೇನರ್‌ಗಳಾಗಿವೆ. ಈ ಷೇರುಗಳು 1.5% ರಿಂದ 3.7% ವರೆಗೆ ಏರಿಕೆಗೊಂಡಿದೆ. ಇದೇ ವೇಳೆಯಲ್ಲಿ ಡಾ. ರೆಡ್ಡಿ ಲ್ಯಾಬ್ಸ್, ಬಜಾಜ್ ಫಿನ್‌ಸರ್ವ್, ಬಿಪಿಸಿಎಲ್(BPCL), ಎಚ್‌ಸಿಎಲ್‌ಟೆಕ್ ಮತ್ತು ಓಎನ್‌ಜಿಸಿ(ONGC) ಕುಸಿತ ಕಂಡಿದ್ದು, 0.1 ರಿಂದ 1 ಪರ್ಸೆಂಟ್‌ನಷ್ಟು ಕುಸಿದಿವೆ.