back to top
25.8 C
Bengaluru
Friday, August 1, 2025
HomeNewsಸೇನಾ ದಿನಕ್ಕೆ Pak Army Chief ಗೆ ಅಮೆರಿಕದ ಆಹ್ವಾನ: India-China ಗೆ ಆತಂಕ

ಸೇನಾ ದಿನಕ್ಕೆ Pak Army Chief ಗೆ ಅಮೆರಿಕದ ಆಹ್ವಾನ: India-China ಗೆ ಆತಂಕ

- Advertisement -
- Advertisement -

Washington: ಜೂನ್ 14ರಂದು ಅಮೆರಿಕದಲ್ಲಿ ನಡೆಯಲಿರುವ ಸೇನಾ ದಿನಾಚರಣೆಗೆ ಪಾಕಿಸ್ತಾನದ ಸೇನಾ ಮುಖ್ಯಸ್ಥ (Pak Army Chief) ಜನರಲ್ ಆಸಿಮ್ ಮುನೀರ್ ಅವರನ್ನು ಆಹ್ವಾನಿಸಲಾಗಿದೆ. ಈ ಬೆಳವಣಿಗೆ ಭಾರತ ಮತ್ತು ಚೀನಾಗೆ (India-China) ಚಿಂತೆಯ ವಿಷಯವಾಗಿದೆ.

ಭಾರತ-ಪಾಕಿಸ್ತಾನ ಸಂಬಂಧ ಪಹಲ್ಗಾಮ್ ದಾಳಿಯ ನಂತರ ಹದಗೆಟ್ಟಿದ್ದು, ಅಮೆರಿಕ-ಚೀನಾ ಸಂಬಂಧ ಕೂಡ ಈ ನಡುವೆ ತೀರಾ ಬಿಗಡಾಯವಾಗಿದೆ. ಈ ಪರಿಸ್ಥಿತಿಯಲ್ಲಿ ಪಾಕಿಸ್ತಾನಕ್ಕೆ ಅಮೆರಿಕ ನೀಡುತ್ತಿರುವ ಪ್ರಾಮುಖ್ಯತೆ ಭಾರತ ಹಾಗೂ ಚೀನಾದ ಮದ್ಯೆ ಆತಂಕ ಮೂಡಿಸಿದೆ.

ಆಸಿಮ್ ಮುನೀರ್ ಇಂದು ಅಮೆರಿಕ ತಲುಪುವ ಸಾಧ್ಯತೆ ಇದೆ. ಅವರು ಅಮೆರಿಕದ ಸೇನಾ ನಾಯಕರ ಜೊತೆ ಸಭೆ ನಡೆಸಲಿದ್ದಾರೆ. ಈ ಸಭೆಯಲ್ಲಿ ಭಯೋತ್ಪಾದನೆ, ಚೀನಾ ಹಾಗೂ ಭಾರತದೊಂದಿಗೆ ಉದ್ವಿಗ್ನತೆ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆ ಇದೆ. ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಭಯೋತ್ಪಾದನೆ ನಿಲ್ಲಿಸಬೇಕೆಂದು ಅಮೆರಿಕ ಪಾಕಿಸ್ತಾನಕ್ಕೆ ಒತ್ತಡ ಹೇರುತ್ತಿದೆ.

ಅಫ್ಘಾನಿಸ್ತಾನಕ್ಕೆ ಅಮೆರಿಕದ ಮಾಜಿ ರಾಯಭಾರಿ ಜಲ್ಮಯ್ ಖಲೀಲ್ಜಾದ್ ಅವರ ಪ್ರಕಾರ, ಮುನೀರ್ ಮತ್ತು ಅಮೆರಿಕದ ನಾಯಕರ ಭೇಟಿಯಲ್ಲಿ ಭಯೋತ್ಪಾದನೆ ಹಾಗೂ ಭಾರತ-ಪಾಕಿಸ್ತಾನ ಶಾಂತಿ ವಿಷಯ ಮುಖ್ಯ ಚರ್ಚೆಯಾಗಲಿದೆ.

ಪಾಕಿಸ್ತಾನ ತನ್ನ ಖನಿಜ ಸಂಪತ್ತಿನಲ್ಲಿ ಹೂಡಿಕೆ ಮಾಡುವಂತೆ ಅಮೆರಿಕವನ್ನು ಒತ್ತಾಯಿಸುತ್ತಿದೆ. ಇದರಿಂದ ಅಮೆರಿಕದ ಬೆಂಬಲವನ್ನು ಪಡೆದು, ಸುಂಕ ಯುದ್ಧ ತಪ್ಪಿಸಿ, ಬಲೂಚ್ ಬಂಡುಕೋರರನ್ನು ನಿಯಂತ್ರಿಸಲು ಪಾಕಿಸ್ತಾನ ಆಶಿಸುತ್ತಿದೆ. ವಿಶೇಷವಾಗಿ ರೆಕೊ ಡಿಕ್ ತಾಮ್ರ ಮತ್ತು ಚಿನ್ನದ ಗಣಿಗಳಲ್ಲಿ ಹಂಚಿಕೊಳ್ಳಲು ಪಾಕಿಸ್ತಾನ ಬಯಸುತ್ತಿದೆ.

ಟ್ರಂಪ್ ಆಡಳಿತದ ಕಾಲದಲ್ಲಿ ಚೀನಾದ ಹೊರತು ಬೇರೆಯು ಖನಿಜ ಪೂರೈಕೆ ಸರಪಳಿಗಳನ್ನು ಬಲಪಡಿಸಲು ಪಾಕಿಸ್ತಾನದಲ್ಲಿ ಹೂಡಿಕೆ ಮಾಡುವ ಇಚ್ಛೆ ವ್ಯಕ್ತವಾಗಿತ್ತು. ಇದರಿಂದ ಪಾಕಿಸ್ತಾನ ಅತೀವ ಉತ್ಸುಕವಾಗಿದೆ. ಇದರ ಮೂಲಕ ಭಾರತ ಮೇಲೆ ಮಾತುಕತೆಗಾಗಿ ಒತ್ತಡ ಹೇರುವ ಯತ್ನವೂ ನಡೆಯುತ್ತಿದೆ.

ಪಾಕಿಸ್ತಾನದ ಗಡಿಯಾಚೆಯ ಭಯೋತ್ಪಾದನೆ ನಿಲ್ಲದ ವರೆಗೆ ಭಾರತ ಯಾವುದೇ ಮಾತುಕತೆಗೆ ಸಿದ್ಧವಿಲ್ಲ ಎಂದು ಬಹಿರಂಗವಾಗಿ ಹೇಳಿದೆ. ಈ ಹಿನ್ನೆಲೆ, ಅಮೆರಿಕ ಪಾಕಿಸ್ತಾನ ಮೇಲೆ ಭಯೋತ್ಪಾದನೆ ನಿಲ್ಲಿಸಲು ಒತ್ತಡ ಹೇರುವ ಸಾಧ್ಯತೆ ಇದೆ.

ಚೀನಾ ಜೊತೆ ಪಾಕಿಸ್ತಾನ ಬಿಆರ್ಐ ಯೋಜನೆಯಡಿ ಸಿಪಿಇಸಿ ಯೋಜನೆ ಮೂಲಕ ಆರ್ಥಿಕವಾಗಿ ಹೆಚ್ಚು ಸಂಪರ್ಕ ಹೊಂದಿದೆ. ಇತ್ತ ಇಮ್ರಾನ್ ಖಾನ್ ಬೆಂಬಲಿಗರು ಮುನೀರ್ ಅವರ ಅಮೆರಿಕ ಭೇಟಿಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅವರು ಅವರನ್ನು ಅಪರಾಧಿ ಎಂದು ಕರೆದು ಟೀಕಿಸುತ್ತಿದ್ದಾರೆ.

ಚೀನಾದ ಆರ್ಥಿಕ ಅವಲಂಬನೆಯಿಂದ ದೂರ ಉಳಿಯಲು ಪಾಕಿಸ್ತಾನ ಪಾಶ್ಚಾತ್ಯ ದೇಶಗಳ ಸಹಿತ ಇತರ ಹೂಡಿಕೆದಾರರನ್ನು ಆಕರ್ಷಿಸಲು ಪ್ರಯತ್ನಿಸುತ್ತಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page