Home Karnataka ED ವಿಚಾರಣೆಗೂ ನಾವು ಸಿದ್ಧ– DCM D.K. Shivakumar ಸ್ಪಷ್ಟನೆ

ED ವಿಚಾರಣೆಗೂ ನಾವು ಸಿದ್ಧ– DCM D.K. Shivakumar ಸ್ಪಷ್ಟನೆ

DCM D.K. Shivakumar

“ನಮ್ಮ ಕುಟುಂಬ ಇಡಿ (ED) ತನಿಖೆ ಎದುರಿಸಲು ಸಂಪೂರ್ಣ ಸಿದ್ಧವಾಗಿದೆ. ನನ್ನ ಮೇಲೆ ಪ್ರಕರಣ ಆದಾಗ ಯಾರೂ ನನ್ನ ಪಕ್ಕಕ್ಕೆ ನಿಲ್ಲಲಿಲ್ಲ. ಈಗ ನನ್ನ ತಮ್ಮ ಡಿ.ಕೆ. ಸುರೇಶ್ ಅವರನ್ನು ವಿಚಾರಣೆಗೆ ಕರೆಯಲಾಗಿದೆ ಅಂತ ನೀವು ದೊಡ್ಡ ವಿಷಯವನ್ನಾಗಿಸುತ್ತಿದ್ದೀರಿ. ಜನಪ್ರತಿನಿಧಿಗಳನ್ನು ಅವರ ಕ್ಷೇತ್ರದಲ್ಲಿ ಯಾರಾದರೂ ಭೇಟಿಯಾಗೋದು ಸಹಜ. ಇಡಿ ಯಾವ ಪ್ರಶ್ನೆ ಕೇಳುತ್ತದೆಯೋ ಅದಕ್ಕೆ ಉತ್ತರ ಕೊಡ್ತಾರೆ. ನಾವು ತನಿಖೆಗೆ ಸಹಕಾರ ಕೊಡಲು ತಯಾರಿದ್ದೇವೆ. ಆದರೆ, ಮುಖ್ಯ ವಿಷಯಗಳನ್ನು ನೀವು ಬಿಂಬಿಸದೆ ಬೇರೆ ಅಂಶಗಳನ್ನೇ ದೊಡ್ಡದಾಗಿ ತೋರಿಸುತ್ತೀರಿ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DCM D.K. Shivakumar) ಬೇಸರ ವ್ಯಕ್ತಪಡಿಸಿದರು.

“ಬಿ.ಆರ್. ಪಾಟೀಲ್ ಬಗ್ಗೆ ನಾನು ಹೇಳಬೇಕಾದುದನ್ನು ಈಗಾಗಲೇ ಹೇಳಿದ್ದೇನೆ. ಉಳಿದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಸತಿ ಸಚಿವರು ನೋಡುತ್ತಾರೆ” ಎಂದು ಸ್ಪಷ್ಟಪಡಿಸಿದರು.

ಶಾಸಕ ರಾಜು ಕಾಗೆ ಆರೋಪ ಕುರಿತು, “ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ವಿಚಾರಿಸಿ ನಿಮಗೆ ತಿಳಿಸುತ್ತೇನೆ” ಎಂದರು ಡಿಸಿಎಂ.

“ಇಡಿ ತನಿಖೆಗೆ ಸಂಪೂರ್ಣ ಸಹಕರಿಸುತ್ತೇನೆ. ಇವರು ನನ್ನನ್ನು ಯಾವ ಅಡಾರದ ಮೇಲೆ ವಿಚಾರಣೆಗೂ ಕರೆದುತ್ತಿದ್ದಾರೆ ಎಂಬುದನ್ನು ತಿಳಿಯಬೇಕಿದೆ. ವಿಚಾರಣೆ ಸಮಯದಲ್ಲಿ ನನ್ನೊಡನೆ ವಕೀಲರು ಇರುತ್ತಾರೆ. ನಂತರ ನಾವು ಅದಕ್ಕೆ ಸಂಬಂಧಿತದಾ ಅಥವಾ ಅಸಂಬಂಧಿತದಾ ಎಂಬುದನ್ನು ತಿಳಿದು ಚರ್ಚೆ ಮಾಡುತ್ತೇವೆ.” ಡಿ.ಕೆ. ಸುರೇಶ್ ಎಂದರು.

“ವಿಚಾರಣೆಗೆ ಹೋದ ಮೇಲೆ ಎಲ್ಲವನ್ನೂ ಗೊತ್ತಾಗುತ್ತದೆ. ಇಡಿ ಪ್ರಶ್ನೆಗಳು ಯಾವ ದಿಕ್ಕಿನಲ್ಲಿ ನಡೆಯುತ್ತಿವೆ ಎಂಬುದನ್ನು ನೋಡಬೇಕು. ಸುಪ್ರೀಂ ಕೋರ್ಡ್ ಹಾಗೂ ಹೈಕೋರ್ಡ್‌ಗಳೂ ಇಡಿಯ ಕ್ರಮಗಳ ಬಗ್ಗೆ ಮುನ್ನೆಚ್ಚರಿಕೆ ನೀಡಿದ್ದಾರೆ. ಆದರೂ ಇಡಿ ಎಚ್ಚೆತ್ತುಕೊಳ್ಳುತ್ತಿಲ್ಲ ಎಂದರೆ ಇದು ಪ್ರಜಾಪ್ರಭುತ್ವಕ್ಕೆ ಧಕ್ಕೆ,” ಎಂದು ಡಿ.ಕೆ. ಸುರೇಶ್ ಆಕ್ರೋಶ ವ್ಯಕ್ತಪಡಿಸಿದರು.

ಐಶ್ವರ್ಯಾ ಗೌಡ ಕುರಿತು, “ನನ್ನ ಹೆಸರು ಬಳಸಿ ವಂಚನೆ ಮಾಡಿದ್ದಾರೆ ಅನ್ನೋದು ತಪ್ಪು. ಅವರೊಡನೆ ನನ್ನಲ್ಲಿ ಯಾವುದೇ ಹಣಕಾಸು ಸಂಬಂಧವೂ ಇಲ್ಲ. ಅವರು ಕೆಲವೊಮ್ಮೆ ನನ್ನ ಗೃಹ ಕಚೇರಿಗೆ ಬಂದು ಕೆಲ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ನನ್ನ ಕ್ಷೇತ್ರದವರಾಗಿ ಅವರ ಕಾರ್ಯಕ್ರಮಗಳಿಗೆ ಹೋಗಿದ್ದೇನೆ. ನಾನು ಅಧಿಕಾರಿಗಳಿಗೆ ಈ ವಿಷಯದಲ್ಲಿ ಸಂಪೂರ್ಣ ಮಾಹಿತಿ ನೀಡುತ್ತೇನೆ” ಎಂದು ಸ್ಪಷ್ಟನೆ ನೀಡಿದ್ದಾರೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version