Friday, April 19, 2024
HomeKarnatakaChikkaballapuraಎಲ್ಲೋಡು ಲಕ್ಷ್ಮೀ ಆದಿನಾರಾಯಣ ಸ್ವಾಮಿಯ ಬ್ರಹ್ಮರಥೋತ್ಸವ

ಎಲ್ಲೋಡು ಲಕ್ಷ್ಮೀ ಆದಿನಾರಾಯಣ ಸ್ವಾಮಿಯ ಬ್ರಹ್ಮರಥೋತ್ಸವ

Gudibande : ಗುಡಿಬಂಡೆ ತಾಲ್ಲೂಕಿನ ಎಲ್ಲೋಡು ಗ್ರಾಮದ ಕೂರ್ಮಗಿರಿ ಲಕ್ಷ್ಮೀ ಆದಿನಾರಾಯಣ ಸ್ವಾಮಿಯ (Yellodu Lakshmi Aadinarayana Swami Temple) ಬ್ರಹ್ಮರಥೋತ್ಸವ (Brahma Rathotsava) ಅಪಾರ ಭಕ್ತರ ಸಮ್ಮುಖದಲ್ಲಿ ಭಾನುವಾರ ತಾಲ್ಲೂಕು ಮುಜರಾಯಿ ಇಲಾಖೆ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ವತಿಯಿಂದ Covid-19 ಹಿನ್ನೆಲೆಯಲ್ಲಿ ಸರಳವಾಗಿ ಶ್ರದ್ಧೆ ಭಕ್ತಿಯಿಂದ ನಡೆಯಿತು. ರತೋತ್ಸವಕ್ಕೆ ತಹಶೀಲ್ದಾರ್ ಸಿಗ್ಬತುಲ್ಲಾ ಚಾಲನೆ ನೀಡಿದರು. ರಥೋತ್ಸವಕ್ಕೆ ಚಾಲನೆ ದೊರಕುತ್ತಿದಂತೆ ನೆರೆದಿದ್ದ ಭಕ್ತರು ಗೋವಿಂದಾ, ಗೋವಿಂದಾ ಎಂಬ ಜಯಘೋಷಣೆಯೊಂದಿಗೆ ರಥ ಎಳೆದರು.

ಸರ್ಕಲ್ ಇನ್‌ಸ್ಪೆಕ್ಟರ್ ಲಿಂಗರಾಜು ಮಾತನಾಡಿ “ಯಾವುದೇ ಅಹಿತಕರ ಘಟನೆಗಳು ಜಾತ್ರೆಯಲ್ಲಿ ನಡೆಯದಂತೆ ಒಂದು ತಿಂಗಳು ಗುಡಿಬಂಡೆ ಪೊಲೀಸ್ ಹೊರಠಾಣೆ ಮುಂಜಾಗ್ರತಾ ಕ್ರಮವಾಗಿ ತೆರೆಯಲಾಗಿದೆ” ಎಂದು ತಿಳಿಸಿದರು.

ಆರ್ಯವೈಶ್ಯಮಂಡಳಿಯಿಂದ ಮೂಲದೇವರ ಉತ್ಸವಮೂರ್ತಿಯನ್ನು ವಿಶೇಷ ಹೂವಿನ ಪಲ್ಲಕಿಯೊಂದಿಗೆ ಸೋಮವಾರ ರಾತ್ರಿ ಮೆರವಣಿಗೆ ಮಾಡುವ ಕಾರ್ಯಕ್ರಮವನ್ನು ಸಹ ಏರ್ಪಡಿಸಲಾಗಿದ್ದು ಜಾತ್ರೆಯ ಪ್ರಯಕ್ತ ಅಪಾರ ಭಕ್ತರು ತಮ್ಮ ಎತ್ತುಗಳನ್ನು ಸಿಂಗರಿಸಿಕೊಂಡು ಎತ್ತಿನಗಾಡಿಯ ಮೂಲಕ ಪಾನಕ, ಮಜ್ಜಿಗೆ, ಕೊಸಂಬರಿಗಳನ್ನು ಜನರಿಗೆ ನೀಡಿದರು.

 

- Advertisement -
 

 

For Daily Updates WhatsApp ‘HI’ to 7406303366

RELATED ARTICLES
- Advertisment -

Most Popular

Karnataka

India

You cannot copy content of this page