ವಿವೋ (Vivo) ಕಂಪನಿಯು ಭಾರತದಲ್ಲಿ ವಿವೋ X200 (Vivo X200) ಸರಣಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಇದರಲ್ಲಿ Vivo X200, Vivo X200 Pro ಮತ್ತು Vivo X200 Pro Mini ಎಂಬ ಮೂರು ಫೋನ್‌ಗಳು (Mobile smart phone) ಮಾರುಕಟ್ಟೆಗೆ ಲಗ್ಗೆ ಇಡಲಿವೆ.
ವಿವೋ X200 ಸರಣಿಯ ಫೋನ್‌ಗಳು ನವೆಂಬರ್ ಅಂತ್ಯದ ವೇಳೆಗೆ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.
ಇತ್ತೀಚೆಗೆ, ವಿವೋ X200 ಪ್ರೊ (Vivo X200 Pro) ಮಾಡೆಲ್ ನಂಬರ್ V2413 ನೊಂದಿಗೆ ಪ್ರಮಾಣೀಕರಣ ವೆಬ್‌ಸೈಟ್ ಎನ್‌ಸಿಸಿಯಲ್ಲಿ ಗುರುತಿಸಿದೆ. ಇದು ಶೀಘ್ರದಲ್ಲೇ ಭಾರತದಲ್ಲಿ ಲಾಂಚ್ ಆಗಲಿದೆ.
ವಿವೋ X200 ಸರಣಿಯನ್ನು ಚೀನಾದಲ್ಲಿ 50,800 ರೂ.ಗಳ (CNY 4,299) ಆರಂಭಿಕ ಬೆಲೆಯಲ್ಲಿ ಪರಿಚಯಿಸಲಾಗಿದೆ.
ವಿವೋ X200 ಪ್ರೊ ಮಿನಿ ಫೋನಿನ ಬೆಲೆ 55,600 ರೂ. (CNY 4,699) ಇದೆ. ಇನ್ನೂ ವಿವೋ X200 ಪ್ರೊನ ಆರಂಭಿಕ ಬೆಲೆ 62,600 ರೂ. (CNY 5,299) ಆಗಿದೆ.
ಕಂಪನಿಯು ಭಾರತದಲ್ಲಿ ವಿವೋ X200 ಸರಣಿ ಬಿಡುಗಡೆ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ, ವಿವೋ X200 ಪ್ರೊ ಮೊಬೈಲ್ ತೈವಾನ್‌ನ ಎನ್‌ಸಿಸಿ ಸೈಟ್‌ನಲ್ಲಿ ಕಾಣಿಸಿಕೊಂಡಿದೆ.
ಕಂಪನಿಯು ವಿವೋ X200 ಪ್ರೊ ವಿನ್ಯಾಸವನ್ನು ಸ್ವಲ್ಪಮಟ್ಟಿಗೆ ಬದಲಾಯಿಸಿದೆ. ಇದು ಈಗ ಫ್ಲಾಟ್ ಡಿಸ್ಪ್ಲೇ ಮತ್ತು ಬಾಕ್ಸ್ ವಿನ್ಯಾಸದೊಂದಿಗೆ ಬರುತ್ತದೆ.
ಹಿಂಭಾಗದಲ್ಲಿರುವ ಕ್ಯಾಮೆರಾ ಮಾಡ್ಯೂಲ್ ನಾವು ವಿವೋ X100 ಸರಣಿಯ ಫೋನ್‌ಗಳಂತೆಯೇ ಇರುತ್ತದೆ.
ವಿವೋ X200 ಪ್ರೊ ಮೊಬೈಲ್ 6.78 ಇಂಚಿನ ಓಎಲ್‌ಇಡಿ ಡಿಸ್ಪ್ಲೇಯನ್ನು ಹೊಂದಿದೆ. ಜೊತೆಗೆ 1.5K ರೆಸಲ್ಯೂಶನ್, 120Hz ರಿಫ್ರೆಶ್ ದರ ಮತ್ತು 4500 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಬೆಂಬಲ ಹೊಂದಿದೆ.
ಕಂಪನಿಯು ವಿವೋ X200 ಪ್ರೊ ಮೊಬೈಲ್ ಅನ್ನು ಮೀಡಿಯಾ ಟೆಕ್ ಡೈಮೆನ್ಶನ್ 9400 ಪ್ರೊಸೆಸರ್‌ನೊಂದಿಗೆ ಬಿಡುಗಡೆ ಮಾಡಲಿದೆ. ಈ ಫೋನ್ 16GB RAM ಮತ್ತು 1TB ಸ್ಟೋರೇಜ್ ಆಯ್ಕೆಯನ್ನು ಹೊಂದಿರಲಿದೆ.
ವಿವೋ ಮುಂಬರುವ ಫೋನಿನ ಕ್ಯಾಮೆರಾ ಬಗ್ಗೆ ಹೆಚ್ಚು ಗಮನಹರಿಸಿದೆ. ಅದರಂತೆ ವಿವೋ X200 ಪ್ರೊ ಸ್ಮಾರ್ಟ್‌ಫೋನ್ 50 ಮೆಗಾಪಿಕ್ಸೆಲ್ LYT 818 ಮುಖ್ಯ ಕ್ಯಾಮೆರಾ ಹೊಂದಿರಲಿದೆ.
ಜೊತೆಗೆ, 50 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಲೆನ್ಸ್ ಮತ್ತು 200 ಮೆಗಾಪಿಕ್ಸೆಲ್ ಝೈಸ್ (Zeiss) APO ಟೆಲಿಫೋಟೋ ಕ್ಯಾಮೆರಾ ಲಭ್ಯವಿರಲಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, ಇದು 32 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.