ಪ್ರೊ ಕಬಡ್ಡಿ 2021 – ಆವೃತ್ತಿ 8 ರ ( Pro Kabaddi League ) ಮೂರನೇ ದಿನದ ಮೂರು ಪಂದ್ಯಗಳು ರೋಚಕವಾಗಿ ನಡೆದವು. ಮಾಜಿ ಚಾಂಪಿಯನ್ ಯು ಮುಂಬಾ (U Mumba) ಮೊದಲ ಪಂದ್ಯದಲ್ಲಿ ಕಳೆದ ಸೀಸನ್‌ನ (Season 7) ಫೈನಲಿಸ್ಟ್‌ಗಳಾದ ದಬಂಗ್ ದೆಹಲಿ ಕೆ.ಸಿ. (Dabang Delhi K.C.) ವಿರುದ್ಧ ಸೆಣಸಾಡಿದರು. ಎರಡನೇ ಪಂದ್ಯದಲ್ಲಿ ಸೀಸನ್ 6 ವಿಜೇತರಾದ ಬೆಂಗಳೂರು ಬುಲ್ಸ್ (Bengaluru Bulls), ತಮಿಳ್ ತಲೈವಾಸ್ (Tamil Thalaivas) ವಿರುದ್ಧ ಕಣಕ್ಕೆ ಇಳಿದರು. ಹಾಲಿ ಚಾಂಪಿಯನ್‌ಗಳಾದ ಬಂಗಾಳ ವಾರಿಯರ್ಸ್ (Bengal Warriors) ಮೂರನೇ ಪಂದ್ಯದಲ್ಲಿ ಎರಡು ಬಾರಿ ರನ್ನರ್ ಅಪ್ ಆಗಿರುವ ಗುಜರಾತ್ ಜೈಂಟ್ಸ್ (Gujarat Giants) ವಿರುದ್ಧ ಸೆಣಸಿದರು.
ಪಂದ್ಯ 1: U Mumba Vs Dabang Delhi K.C.
ಯು ಮುಂಬಾ (U Mumba) ತಂಡ ದಬಾಂಗ್ ಡೆಲ್ಲಿ ಕೆ.ಸಿ. (Dabang Delhi K.C.) ವಿರುದ್ಧ ಪಂದ್ಯಾವಳಿಯಲ್ಲಿ ಮೊದಲ ಸೋಲನ್ನು ಅನುಭವಿಸಿತು. ಕೇವಲ 4 ಅಂಕಗಳ ಅಂತರದಲ್ಲಿ ಯು ಮುಂಬಾ ತಂಡ 31-27 ಅಂಕಗಳಿಂದ ಸೋಲನ್ನು ಕಂಡಿತು. ತಂಡದ ಸ್ಟಾರ್ ಆಟಗಾರರಾದ ಅಭಿಷೇಕ್ ಸಿಂಗ್ (Abhishek Singh) 5 ಅಂಕಗಳನ್ನು ಗಳಿಸಿದರೆ, ಫಝೆಲ್ ಅತ್ರಾಚಲಿ (Fazel Atrachali) ಖಾತೆ ತೆರೆಯಲು ವಿಫಲರಾದರು. ದಬಾಂಗ್ ಡೆಲ್ಲಿ ಕೆಸಿ ಪರ ನವೀನ್ ಕುಮಾರ್ (Naveen Kumar) 17 ಅಂಕ ಗಳಿಸಿದರು.
ಪಂದ್ಯ 2: Bengaluru Bulls Vs Tamil Thalaivas
ಮೊದಲ ಪಂದ್ಯದ ಸೋಲಿನ ನಂತರ ಬೆಂಗಳೂರು ಬುಲ್ಸ್ (Bengaluru Bulls) ಮೂರನೇ ದಿನದ ಎರಡನೇ ಪಂದ್ಯದಲ್ಲಿ ತಮಿಳ್ ತಲೈವಾಸ್ (Tamil Thalaivas) ವಿರುದ್ಧ ಅದ್ಭುತ ಆಟ ಪ್ರದರ್ಶಿಸಿ ಮೊದಲ ಗೆಲುವನ್ನು ಸಾಧಿಸಿತು. ಪವನ್ ಕುಮಾರ್ ಸೆಹ್ರಾವತ್ (Pawan Kumar Sehrawat) ನೇತೃತ್ವದ ಬುಲ್ಸ್ ಬೆಂಗಳೂರು ಬುಲ್ಸ್ 8 ಅಂಕಗಳ ಅಂತರದಲ್ಲಿ 38-30 ಅಂಕಗಳಿಂದ ತಮಿಳ್ ತಲೈವಾಸ್ ತಂಡವನ್ನು ಸೋಲಿಸಿತು.
ಒಂಬತ್ತು ಟಚ್ ಪಾಯಿಂಟ್‌ಗಳನ್ನು ಗಳಿಸುವ ಮೂಲಕ ಪವನ್ (Pawan Kumar Sehrawat) ಉತ್ತಮ ಆಟ ಪ್ರದರ್ಶಿಸಿದರು. ಚಂದ್ರನ್ ರಂಜಿತ್ (Chandran Ranjit) 7 ಅಂಕಗಳನ್ನು ಪಡೆದರು ಮತ್ತು ಸೌರಭ್ ನಂದಲ್ (Saurabh Nandal) ಅವರು 5 ಅಂಕಗಳನ್ನು ಗಳಿಸಿದರು.
ಪಂದ್ಯ 3: Bengal Warriors Vs Gujarat Giants
ರೋಚಕ ಮೂರನೇ ದಿನದ ಮೂರನೇ ಆಟದಲ್ಲಿ ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ (Bengal Warriors), ಗುಜರಾತ್ ಜೈಂಟ್ಸ್ ವಿರುದ್ದದ ಪಂದ್ಯಾವಳಿಯಲ್ಲಿ ತಮ್ಮ ಎರಡನೇ ಗೆಲುವು ದಾಖಲಿಸಿದರು. ಮಣಿಂದರ್ ಸಿಂಗ್ (Maninder Singh) ಅವರ 8 ರೇಡ್ ಪಾಯಿಂಟ್‌ಗಳ ನೆರವಿನಿಂದ ವಾರಿಯರ್ಸ್ ತಂಡ 31-28 ಅಂಕಗಳ ಅಂತರರಿಂದ ಜೈಂಟ್ಸ್ ಅನ್ನು ಸೋಲಿಸಿತು.
ಜೈಂಟ್ಸ್ ಪರ ರಾಕೇಶ್ ನರ್ವಾಲ್ (Rakesh Narwal) ಅವರ ಸೂಪರ್ 10 (Super 10), 11 ರೇಡ್ ಪಾಯಿಂಟ್‌ಗಳು ತಂಡವನ್ನು ಗೆಲ್ಲಿಸುವಲ್ಲಿ ವಿಫಲವಾಯಿತು.
PKL 2021 Day – 3 Score Card
PKL 2021 ರ ಮೂರನೇ ದಿನದ ಒಂಬತ್ತು ಪಂದ್ಯಗಳ ನಂತರ, ದಬಾಂಗ್ ಡೆಲ್ಲಿ ಕೆ.ಸಿ. (Dabang Delhi K.C.) ಮತ್ತು ಬೆಂಗಾಲ್ ವಾರಿಯರ್ಸ್ (Bengal Warriors) ಪ್ರೊ ಕಬಡ್ಡಿ 2021 ರಲ್ಲಿ ಅಗ್ರ ಸ್ಥಾನ ಪಡೆದಿವೆ.
Image : Pro Kabaddi