New Delhi: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಚುನಾವಣೆ ಆಯೋಗದ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. “ಚುನಾವಣೆ ಆಯೋಗ (Election Commission) ಮತ ಕಳ್ಳತನದಲ್ಲಿ ಭಾಗವಹಿಸಿದೆ. ನಮ್ಮ ಬಳಿ ಈ ಕುರಿತು ಶೇಕಡಾ 100 ಪುರಾವೆಗಳಿವೆ” ಎಂದು ಅವರು ಹೇಳಿದ್ದಾರೆ. ಬಿಹಾರದಲ್ಲಿ ನಡೆದ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಆಯೋಗ ಬಿಜೆಪಿ ಪರವಾಗಿ ಕೆಲಸ ಮಾಡಿದೆ ಎಂದು ಅವರು ಆರೋಪಿಸಿದರು.
ಆದರೆ ಚುನಾವಣಾ ಆಯೋಗ ಈ ಆರೋಪವನ್ನು ತೀವ್ರವಾಗಿ ತಿರಸ್ಕರಿಸಿದ್ದು, “ಇವು ಆಧಾರರಹಿತ ಮತ್ತು ಜವಾಬ್ದಾರಿಯಿಲ್ಲದ ಹೇಳಿಕೆಗಳು. ನಾವು ಪ್ರಾಮಾಣಿಕವಾಗಿ ಮತ್ತು ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದೇವೆ” ಎಂದು ಸ್ಪಷ್ಟಪಡಿಸಿದೆ.
ಚುನಾವಣೆ ಆಯೋಗದ ಅಧಿಕಾರಿಗಳಿಗೆ ಈ ರೀತಿಯ ಆರೋಪಗಳನ್ನು ನಿರ್ಲಕ್ಷಿಸಲು ಸೂಚನೆ ನೀಡಲಾಗಿದೆ. ಆಯೋಗವು ಪ್ರತಿದಿನವೂ ಇಂತಹ ಆರೋಪಗಳನ್ನು ಕೇಳುತ್ತಿದ್ದರೂ, ತನ್ನ ಕೆಲಸದಲ್ಲಿ ನ್ಯಾಯ ಮತ್ತು ಪಾರದರ್ಶಕತೆಯನ್ನು ಮುಂದುವರಿಸುತ್ತಿದೆ ಎಂದು ಹೇಳಿದೆ.