Bengaluru : ಕರ್ನಾಟಕ ರಾಜ್ಯದ 20 ಜಿಲ್ಲೆಗಳ 58 ಪಟ್ಟಣ ಪಂಚಾಯತಿ (Town Panchayat), ಪುರಸಭೆ (Town Municipal Council) ಮತ್ತು ನಗರಸಭೆ (City Municipal Council) ಹಾಗೂ 59 ಗ್ರಾಮ ಪಂಚಾಯತಿಗಳ ಸ್ಥಳೀಯ ಸಂಸ್ಥೆಗಳಿಗೆ (Karnataka Local Body Elections) ನಡೆದ ಚುನಾವಣೆಯ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಪ್ರತಿಪಕ್ಷ ಕಾಂಗ್ರೆಸ್ (Indian National Congress – INC) ಆಡಳಿತಾರೂಢ ಬಿಜೆಪಿಯನ್ನು (Bharatiya Janata Party – BJP) ಮೀರಿಸಿದೆ.
ಸೋಮವಾರ ನಡೆದ 1,184 ವಾರ್ಡ್‌ಗಳ ಚುನಾವಣೆಲ್ಲಿ ಕಾಂಗ್ರೆಸ್ 501 ರಲ್ಲಿ ಗೆದ್ದಿದ್ದರೆ, ಬಿಜೆಪಿ 433 ಮತ್ತು JDS 45 ಸ್ಥಾನಗಳನ್ನು ಗೆದ್ದಿದೆ. ಉಳಿದ 205 ಸ್ಥಾನಗಳನ್ನು ಸ್ವತಂತ್ರ ಅಭ್ಯರ್ಥಿಗಳು ಮತ್ತು ಸಣ್ಣ ಪಕ್ಷಗಳು ಗೆದ್ದಿವೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.
2023ರ ವಿಧಾನಸಭಾ ಚುನಾವಣೆಗೆ ಮುನ್ನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿನ್ನೆಡೆ ಕಂಡಿರುವುದು ಆಡಳಿತಾರೂಢ ಬಿಜೆಪಿಗೆ ಎಚ್ಚರಿಕೆಯ ಸಂಕೇತವಾಗಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Chief Minister Basavaraj Bommai) ಅವರ ತವರು ಕ್ಷೇತ್ರವಾದ ಶಿಗ್ಗಾಂವಿಯ ಬಂಕಾಪುರ ಪಟ್ಟಣ ಪುರಸಭೆ ಮತ್ತು ಗುತ್ತಲ್ ಪಟ್ಟಣ ಪಂಚಾಯಿತಿಯನ್ನು ಕಾಂಗ್ರೆಸ್ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.