back to top
15.8 C
Bengaluru
Tuesday, December 17, 2024
HomeSportsKabaddiPro Kabaddi League - Day 10 ಹತ್ತನೇ ದಿನದ ಆಟಗಳು

Pro Kabaddi League – Day 10 ಹತ್ತನೇ ದಿನದ ಆಟಗಳು

- Advertisement -
- Advertisement -

Pro Kabaddi 2021 – ಆವೃತ್ತಿ 8 ರ ಹತ್ತನೇ ದಿನವಾದ ಶುಕ್ರವಾರದಂದು ಬೆಂಗಳೂರಿನಲ್ಲಿ ನಡೆದ ಎರಡು ರೋಚಕ ಪಂದ್ಯಗಳು ಕ್ರೀಡಾಭಿಮಾನಿಗಳಿಗೆ ರಸದೌತಣ ನೀಡಿದವು. ಮೊದಲ ಪಂದ್ಯದಲ್ಲಿ ತಮಿಳ್ ತಲೈವಾಸ್ (Tamil Thalaivas) ಮತ್ತು ಪುಣೇರಿ ಪಲ್ಟಾನ್ (Puneri Paltan) ಮುಖಾಮುಖಿಯಾದರೆ, ಎರಡನೇ ಪಂದ್ಯದಲ್ಲಿ ಮೂರು ಬಾರಿಯ ಚಾಂಪಿಯನ್ ಪಾಟ್ನಾ ಪೈರೇಟ್ಸ್, ಹಾಲಿ ಚಾಂಪಿಯನ್ ಬೆಂಗಾಲ್ ವಾರಿಯರ್ಸ್ ಅನ್ನು ಎದುರಿಸಿತು.

ಪಂದ್ಯ 1: Tamil Thalaivas Vs Puneri Paltan

ದಿನದ ಆರಂಭಿಕ ಪಂದ್ಯದಲ್ಲಿ ತಮಿಳ್ ತಲೈವಾಸ್ (Tamil Thalaivas) 10 ಅಂಕಗಳಿಂದ (36-26) ಪುಣೇರಿ ಪಲ್ಟಾನ್ (Puneri Paltan) ತಂಡವನ್ನು ಸೋಲಿಸುವ ಮೂಲಕ 2021 ರ ಪ್ರೊ ಕಬಡ್ಡಿಯ ಮೊದಲ ಗೆಲುವನ್ನು ದಾಖಲಿಸಿತು. ತಮಿಳ್ ತಲೈವಾಸ್ ಪರ ಅಜಿಂಕ್ಯ ಪವಾರ್ (Ajinkya Pawar) ಸೂಪರ್ 10, ಮಂಜೀತ್‌ (Manjeet) 8 ರೇಡ್ ಪಾಯಿಂಟ್‌ಗಳನ್ನು ಗಳಿಸಿದರು. ಪುಣೇರಿ ಪಲ್ಟನ್ ಪರ ಪಂಕಜ್ ಮೋಹಿತೆ (Pankaj Mohite) 8 ರೇಡ್ ಪಾಯಿಂಟ್ಸ್ ಗಳಿಸಿದರು.

Tamil Thalaivas Vs Puneri Paltan Pro Kabaddi League 2021

ಪಂದ್ಯ 2: Patna Pirates Vs Bengal Warriors

ದಿನದ ಎರಡನೇ ಪಂದ್ಯದಲ್ಲಿ ಪಾಟ್ನಾ ಪೈರೇಟ್ಸ್ (Patna Pirates) ವಿರುದ್ಧ ಬೆಂಗಾಲ್ ವಾರಿಯರ್ಸ್ (Bengal Warriors) 14 ಅಂಕಗಳಿಂದ (44-30) ಸೋಲುವುದರೊಂದಿಗೆ ಪ್ರೊ ಕಬಡ್ಡಿ 2021 ರಲ್ಲಿ ಹ್ಯಾಟ್ರಿಕ್ ಸೋಲುಗಳನ್ನು ಪೂರ್ಣಗೊಳಿಸಿತು. ಪೈರೇಟ್ಸ್ ಪರ ಮೋನು ಗೋಯತ್ (Monu Goyat) 15 ಅಂಕಗಳನ್ನು, ಸುನಿಲ್ (Sunil) 4 ಟ್ಯಾಕಲ್ ಪಾಯಿಂಟ್‌ಗಳನ್ನು ಗಳಿಸಿದರು. ಬಂಗಾಳದ ಪರವಾಗಿ ನಾಯಕ ಮಣಿಂದರ್ ಸಿಂಗ್ (Maninder Singh) 12 ಅಂಕಗಳನ್ನು, ಅಮಿತ್ ನಿರ್ವಾಲ್ (Amit Nirwal) 5 ಅಂಕಗಳನ್ನು ಗಳಿಸಿದರು.

Patna Pirates Vs Bengal Warriors Pro Kabaddi League 2021

PKL 2021 Day – 10 Score Card

PKL 2021 ರ ಹತ್ತನೇ ದಿನದ ಪಂದ್ಯಗಳ ನಂತರ ತಂಡಗಳ ಬಲಾಬಲಗಳು ಈ ರೀತಿ ಇವೆ

Pro Kabaddi League Season 8 PKL 2021 Day 10 Points Table Score card


Image: Pro Kabaddi

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!

You cannot copy content of this page