Kerala : ಕೇರಳದ ತ್ರಿಶೂರ್ (Thrissur) ಜಿಲ್ಲೆಯಲ್ಲಿ ಭಾನುವಾರ ಮಂಕಿಪಾಕ್ಸ್ (Monkeypox) ರೋಗಲಕ್ಷಣಗಳನ್ನ ಹೊಂದಿದ್ದ 22 ವರ್ಷದ ಯುವಕ ಮೃತಪಟ್ಟಿದ್ದಾನೆ (Death) ಎಂದು ಕೇರಳ ಸರ್ಕಾರ ತಿಳಿಸಿದೆ. July 22 ರಂದು UAE ಯಿಂದ ಬಂದಿದ್ದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ರೋಗಲಕ್ಷಣಗಳು ಕಾಣಿಸಿದ್ದು ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತು ಮತ್ತು July 27 ರಂದು ಆತನಿಗೆ ಮಂಕಿಪಾಕ್ಸ್ ದೃಢವಾಗಿತ್ತು.
ರೋಗಿಯ ನಿಧನದ ನಂತರ ಕೇರಳ ರಾಜ್ಯ ಆರೋಗ್ಯ ಇಲಾಖೆ ಪುನ್ನಾಯೂರಿನಲ್ಲಿ ಸಭೆ ಕರೆದಿತ್ತು. ಸಭೆಯ ಬಳಿಕ ಮಾಧ್ಯಮದವರೊಡನೆ ಮಾತನಾಡಿದ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ (Veena George) “ವಿದೇಶದಲ್ಲಿ ನಡೆಸಿದ ಪರೀಕ್ಷೆಯ ಫಲಿತಾಂಶವು ಸಕಾರಾತ್ಮಕವಾಗಿತ್ತು. ಆತ ತ್ರಿಶೂರ್ ನಲ್ಲಿ ಚಿಕಿತ್ಸೆ ಪಡೆದಿದ್ದು, ಚಿಕಿತ್ಸೆ ಪಡೆಯುವಲ್ಲಿನ ವಿಳಂಬದ ಬಗ್ಗೆ ತನಿಖೆ ನಡೆಸಲಾಗುವುದು ಮತ್ತು ಚಾವಕ್ಕಾಡ್ ಕುರಂಜಿಯೂರ್‌ನಲ್ಲಿ ಮಂಕಿಪಾಕ್ಸ್ ರೋಗಲಕ್ಷಣಗಳನ್ನ ಹೊಂದಿರುವ ವ್ಯಕ್ತಿಯ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು” ಎಂದು ತಿಳಿಸಿದರು.
ಮೃತ ಯುವಕನ ಸಂಪರ್ಕ ಪಟ್ಟಿ (Primary Contact) ಮತ್ತು ಮಾರ್ಗ ನಕ್ಷೆಯನ್ನ ಆರೋಗ್ಯ ಇಲಾಖೆ ಸಿದ್ಧಪಡಿಸಿದ್ದು ಸಂಪರ್ಕದವರನ್ನು ಪ್ರತ್ಯೇಕಿಸಲು (Isolation) ಮತ್ತು ಮೇಲ್ವಿಚಾರಣೆ ಮಾಡಲು ಸಜ್ಜಾಗಿದೆ.
Image : ANI