Bengaluru: ಕರ್ನಾಟಕದ (Karnataka) ರಾಜಧಾನಿ ನಗರದಲ್ಲಿ ಭಾರೀ ಮಳೆಯಾಗಿದೆ. ಆದರೆ, ಕಳಪೆ ಸೌಕರ್ಯವ್ಯವಸ್ಥೆ ಕಾರಣಕ್ಕೆ, ಮಳೆ ಬಂದಾಗ ಇಡೀ ಉದ್ಯಾನನಗರಿಯೇ (garden city) ದೊಡ್ಡ ಸರೋವರದಂತಾಗುತ್ತದೆ. ಸಿಮೆಂಟ್ ಅಥವಾ ಡಾಂಬರು ಕಿತ್ತು ಹೋದ ರಸ್ತೆಗಳು, ವಿಪರೀತ ವಾಹನ ದಟ್ಟನೆ ಇವೆಲ್ಲವೂ ಹೆಚ್ಚಿನ ಬೆಂಗಳೂರಿಗರನ್ನು ಹೈರಾಣಗೊಳಿಸಿದೆ.
ಇದರಿಂದ ಬೇಸತ್ತಿರುವ ಬೆಂಗಳೂರಿನ ಉದ್ಯಮಿಗಳಿಗೆ ಆಂಧ್ರಪ್ರದೇಶ ಕೈಬೀಸಿ ಆಹ್ವಾನಿಸುತ್ತಿದೆ. ಟಿಡಿಪಿ ಪ್ರಧಾನ ಕಾರ್ಯದರ್ಶಿ ಹಾಗೂ ಆಂಧ್ರ ಸಚಿವ ನಾರ ಲೋಕೇಶ್ ಅವರು ಬೆಂಗಳೂರಿನ MNC ಗಳನ್ನು ಆಂಧ್ರಕ್ಕೆ ಶಿಫ್ಟ್ ಆಗಬೇಕೆಂದು ಕರೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕರ್ನಾಟಕದ ಉದ್ಯಮಿ ಮೋಹನದಾಸ್ ಪೈ, ಈ ಆಫರ್ ಅನ್ನು ನಯವಾಗಿ ತಿರಸ್ಕರಿಸಿದ್ದಾರೆ.
ಬೆಂಗಳೂರಿನ ರಸ್ತೆ, ಚರಂಡಿ, ಹೊರವರ್ತು ರಸ್ತೆಯಲ್ಲಿನ ಟ್ರಾಫಿಕ್ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರದಿಂದ ಸರಿಯಾದ ಕ್ರಮ ಆಗುತ್ತಿಲ್ಲ. ಇದರಿಂದ ಎಂಎನ್ಸಿಗಳಿಗೆ ನಿರಾಸೆಯಾಗಿದ್ದು, ನಗರದ ಹೊರಗೆ ವಿಸ್ತರಿಸಲು ಗಂಭೀರವಾಗಿ ಯೋಜಿಸುತ್ತಿವೆ.
ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳು ತಾವು ಕೊಟ್ಟ ಮಾತನ್ನು ಪಾಲಿಸುತ್ತಿಲ್ಲ. ವಿಶ್ವಾಸ ಕಡಿಮೆ ಆಗಿದೆ. ಇದು ನಿಜಕ್ಕೂ ಬಹಳ ಗಂಭೀರ ವಿಚಾರ ಎಂದು ಮೋಹನ್ ದಾಸ್ ಪೈ ಅ. 21ರಂದು ತಮ್ಮ X ಪೋಸ್ಟ್ನಲ್ಲಿ ಅಸಮಾಧಾನ ತೋಡಿಕೊಂಡಿದ್ದರು.
ಮೋಹನ್ದಾಸ್ ಪೈ ಅವರ ಪೋಸ್ಟ್ಗೆ ಆಂಧ್ರ ಸಚಿವ ನಾರ ಲೋಕೇಶ್ ಇಂದು ಪ್ರತಿಕ್ರಿಯಿಸಿ, ಬೆಂಗಳೂರಿನ ಉದ್ಯಮಿಗಳನ್ನು ಆಂಧ್ರಕ್ಕೆ ಬರುವಂತೆ ಆಹ್ವಾನಿಸಿದ್ದಾರೆ.
‘ಎಲ್ಲಾ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ಆಂಧ್ರಕ್ಕೆ ಬರಬೇಕೆಂದು ಆಹ್ವಾನಿಸುತ್ತೇನೆ. ಆಂಧ್ರದಲ್ಲಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಉದ್ಯಮ ಸ್ನೇಹಿ ನೀತಿಗಳನ್ನು ಜಾರಿಗೆ ತಂದಿದ್ದಾರೆ.
ಉದ್ಯಮಗಳನ್ನು ನಮ್ಮ ರಾಜ್ಯದ ಕಲ್ಯಾಣ ಮತ್ತು ಪ್ರಗತಿಗೆ ಪ್ರಮುಖ ಭಾಗಿದಾರರಾಗಿ ಪರಿಗಣಿಸುತ್ತೇವೆ. ವಿಶ್ವದರ್ಜೆ ಮೂಲಸೌಕರ್ಯ ಹಾಗೂ ಅಸಾಧಾರಣ ಬಿಸಿನೆಸ್ ಇಕೋಸಿಸ್ಟಂ ಅನ್ನು ನಾವು ಒದಗಿಸಲು ಸಿದ್ಧರಿದ್ದೇವೆ,’ ಎಂದು ನಾರ ಲೋಕೇಶ್ ಹೇಳಿದ್ದಾರೆ.
For Daily Updates WhatsApp ‘HI’ to 7406303366
Image: PTI