Bengaluru : BBMP ವ್ಯಾಪ್ತಿಯಲ್ಲಿ ರಸ್ತೆ ಗುಂಡಿಗಳನ್ನು (Potholes) ಮುಚ್ಚುವ ಹಾಗೂ ಅನಧಿಕೃತ ರಸ್ತೆ ಕತ್ತರಿಸುವಿಕೆಯನ್ನು ತಡೆಯುವ ಸಲುವಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ನೇತೃತ್ವದಲ್ಲಿ ಮಂಗಳವಾರ ಪಾಲಿಕೆ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಯಿತು.
ಸಭೆಯ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಆಯುಕ್ತರು ” ಜಲ ಮಂಡಳಿಯಿಂದ ಪೈಪ್‌ಲೈನ್ ಅಳವಡಿಕೆ ಕಾಮಗಾರಿ ಇನ್ನೂ ಪೂರ್ಣಗೊಳ್ಳಬೇಕಿದ್ದು ಅನಗತ್ಯವಾಗಿ ವಿಳಂಬ ಮಾಡದೆ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸದಿದ್ದರೆ ನೋಟೀಸ್ ನೀಡಲು ಎಂಜಿನಿಯರ್‌ಗಳಿಗೆ ತಿಳಿಸಲಾಗಿದೆ. ಹಾಳಾದ ರಸ್ತೆಗಳನ್ನು ಸರಿಪಡಿಸಲು ಅವಕಾಶ ಇರುವ ಕಡೆ ವಿಳಂಬ ಮಾಡದೆ ದುರಸ್ತಿ ಮಾಡಬೇಕೆಂದು ಎಂಜಿನಿಯರ್‌ಗಳಿಗೆ ಎಚ್ಚರಿಕೆ ನೀಡಿದ್ದೇನೆ. ಅನುಮತಿ ಇಲ್ಲದೆ ರಸ್ತೆ ಅಗೆದು ಗುಂಡಿ ಮಾಡಿದರೆ ಮುಲಾಜಿಲ್ಲದೆ ಎಫ್‌ಐಆರ್ ದಾಖಲಿಸಲು ಸೂಚಿಸಿದ್ದೇನೆ. ಕೆರೆ ಒತ್ತುವರಿ ತೆರೆವಿಗೆ ಸೂಚನೆ ನೀಡಿದ್ದು ಕೆರೆಗಳ ಜಾಗದಲ್ಲಿ ಉದ್ಯಾನ ಅಭಿವೃದ್ಧಿಪಡಿಸುವ ಯೋಜನೆ ಪಾಲಿಕೆ ಮುಂದೆ ಇಲ್ಲ. ಹೈಕೋರ್ಟ್ ನಿಗದಿತ ಸಮಯದೊಳಗೆ ರಸ್ತೆಗಳ ಗುಂಡಿಗಳ ಮುಚ್ಚಿ ಸರಿಪಡಿಸಲು ಸಂಬಂಧಪಟ್ಟ ಎಲ್ಲ ಎಂಜಿನಿಯರ್‌ಗಳಿಗೆ ಸೂಚನೆ ನೀಡಲಾಗಿದೆ” ಎಂದು ಹೇಳಿದರು.
ಸಭೆಯಲ್ಲಿ ವಿಶೇಷ ಆಯುಕ್ತರು (ಯೋಜನೆ) ಮನೋಜ್ ಜೈನ್, ಎಲ್ಲಾ ವಲಯ ಮುಖ್ಯ ಇಂಜಿನಿಯರ್ ಗಳು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.