New Delhi, India : 15-17 ವರ್ಷ ವಯಸ್ಸಿನವರಿಗೆ ಯಶಸ್ವಿ ಲಸಿಕಾಕರಣದ ನಂತರ, 12-14 ವಯಸ್ಸಿನವರಿಗೆ ಕೋವಿಡ್ ಲಸಿಕೆ (Covid-19 Vaccine) ನೀಡುವ ಕಾರ್ಯಕ್ರಮವು ಫೆಬ್ರವರಿ ಅಂತ್ಯದಿಂದ ಪ್ರಾರಂಭವಾಗಲಿದೆ ಎಂದು ನ್ಯಾಷನಲ್ ಟೆಕ್ನಿಕಲ್‌ನ ಕೋವಿಡ್ -19 ವರ್ಕಿಂಗ್ ಗ್ರೂಪ್‌ನ (National Technical Advisory Group on Immunisation – NTAGI) ಅಧ್ಯಕ್ಷ ಡಾ. ಎನ್. ಕೆ. ಅರೋರಾ (Dr. N K Arora) ತಿಳಿಸಿದ್ದಾರೆ.
ಈ ವರ್ಷದ ಜನವರಿ 3 ರಂದು ಚಾಲನೆ ನೀಡಿದ ನಂತರ ಕೇವಲ 13 ದಿನಗಳಲ್ಲಿ ದೇಶದ ಸುಮಾರು 45% 15 ರಿಂದ 17 ವರ್ಷ ವಯಸ್ಸಿನ ಒಟ್ಟು 3.31 ಕೋಟಿ ಮಕ್ಕಳು ಈಗಾಗಲೇ ತಮ್ಮ ಮೊದಲ ಡೋಸ್ ಅನ್ನು ಸ್ವೀಕರಿಸಿದ್ದಾರೆ.
“15-17 ವಯಸ್ಸಿನ ಎಲ್ಲಾ 7.4 ಕೋಟಿ ಹದಿಹರೆಯದವರನ್ನು ಜನವರಿ ಅಂತ್ಯದ ವೇಳೆಗೆ ಮೊದಲ ಡೋಸ್‌ನೊಂದಿಗೆ ಒಳಗೊಳ್ಳುವ ಗುರಿಯನ್ನು ನಾವು ಹೊಂದಿದ್ದೇವೆ, ಇದರಿಂದಾಗಿ ನಾವು ಫೆಬ್ರವರಿ ಆರಂಭದಿಂದ ಎರಡನೇ ಡೋಸ್‌ನೊಂದಿಗೆ ಲಸಿಕೆಯನ್ನು ಪ್ರಾರಂಭಿಸಬಹುದು ಮತ್ತು ಫೆಬ್ರವರಿ ಅಂತ್ಯದ ವೇಳೆಗೆ ಎರಡನೇ ಡೋಸ್ ಅನ್ನು ಪೂರ್ಣಗೊಳಿಸಬಹುದು. ಫೆಬ್ರವರಿ-ಅಂತ್ಯ ಅಥವಾ ಮಾರ್ಚ್ ಆರಂಭದಿಂದ 12 ಮತ್ತು 14 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಲು ನಾವು ಬಯಸುತ್ತೇವೆ” ಎಂದು ಡಾ. ಅರೋರಾ ತಿಳಿಸಿದ್ದಾರೆ ಎಂದು TOI ವರದಿ ಮಾಡಿದೆ.