Sunday, June 16, 2024
HomeKarnatakaChikkaballapuraSSLC ಪರೀಕ್ಷಾ ಸಿದ್ಧತೆ ಕುರಿತು ಮಕ್ಕಳೊಂದಿಗೆ DC ಸಂವಾದ

SSLC ಪರೀಕ್ಷಾ ಸಿದ್ಧತೆ ಕುರಿತು ಮಕ್ಕಳೊಂದಿಗೆ DC ಸಂವಾದ

Chikkaballapur : ಚಿಕ್ಕಬಳ್ಳಾಪುರ ನಗರದ ಬಿ.ಬಿ. ರಸ್ತೆಯ (BB Road) ಸರ್ಕಾರಿ ಪ್ರೌಢಶಾಲೆಗೆ (Government High School) ಜಿಲ್ಲಾಧಿಕಾರಿ ಆರ್. ಲತಾ (Deputy Commissioner R. Latha) ಮಂಗಳವಾರ ಭೇಟಿ ನೀಡಿ SSLC ವಿದ್ಯಾರ್ಥಿಗಳೊಂದಿಗೆ ಪರೀಕ್ಷಾ ಸಿದ್ಧತೆ ಕುರಿತು ಸಂವಾದ ನಡೆಸಿದರು.

2019-20 ಮತ್ತು 2020-21ನೇ ಸಾಲಿನ SSLC ಫಲಿತಾಂಶದ ವಿಚಾರದಲ್ಲಿ ಜಿಲ್ಲೆಯು ರಾಜ್ಯಮಟ್ಟದಲ್ಲಿ ಗಮನ ಸೆಳೆದಿದ್ದು ಈ ಸಾಧನೆಯನ್ನು 2021-22ನೇ ಸಾಲಿನಲ್ಲಿಯೂ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಅಭ್ಯಾಸ ಮಾಡಬೇಕು. ಈಗಾಗಲೇ ಶಿಕ್ಷಕರು ಪಠ್ಯಕ್ರಮವನ್ನು ಪೂರ್ಣಗೊಳಿಸಿದ್ದು ಪಠ್ಯಕ್ಕೆ ಸಂಬಂಧಿಸಿದಂತೆ ಪುನರ್ಮನನ ಮಾಡಿಕೊಂಡು ಅರ್ಥವಾಗದ ವಿಷಯಗಳ ಬಗ್ಗೆ ಶಿಕ್ಷಕರೊಂದಿಗೆ ಚರ್ಚಿಸಿ ಎಲ್ಲಾ ವಿದ್ಯಾರ್ಥಿಗಳು 90% ಕ್ಕಿಂತ ಅಧಿಕ ಅಂಕಗಳನ್ನು ಪಡೆಯಲು ಶ್ರಮಿಸಬೇಕು. ಯೋಜಿತ ರೀತಿಯಲ್ಲಿ ಶಿಕ್ಷಕರ ಮಾರ್ಗದರ್ಶನ ಪಡೆದು ಅಭ್ಯಾಸ ಮಾಡಿದರೆ, ಯಶಸ್ಸುಗಳಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.

ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಜಯರಾಮರೆಡ್ಡಿ, ಶಿಕ್ಷಕರು ಸಂವಾದದಲ್ಲಿ ಉಪಸ್ಥಿತರಿದ್ದರು.

 

 

- Advertisement -

For Daily Updates WhatsApp ‘HI’ to 7406303366

RELATED ARTICLES
- Advertisment -

Most Popular

Karnataka

India

You cannot copy content of this page