Saturday, February 4, 2023
HomeKarnatakaChikkaballapuraಮಹಾಶಿವರಾತ್ರಿ ಅಂಗವಾಗಿ ಶಿವೋತ್ಸವ ಕಾರ್ಯಕ್ರಮ

ಮಹಾಶಿವರಾತ್ರಿ ಅಂಗವಾಗಿ ಶಿವೋತ್ಸವ ಕಾರ್ಯಕ್ರಮ

Chikkaballapur : ಚಿಕ್ಕಬಳ್ಳಾಪುರ ಜಿಲ್ಲೆಯ ಪ್ರಸಿದ್ಧ ನಂದಿಯ (Nandi) ಭೋಗ ನಂದೀಶ್ವರ ದೇವಾಲಯದ (Shree Bhoga Nandishwara Temple) ಆವರಣದಲ್ಲಿ ಮಹಾಶಿವರಾತ್ರಿ (Mahashivaratri) ಹಬ್ಬದ ಅಂಗವಾಗಿ ಶಿವೋತ್ಸವ (Shivotsava) ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಶಂಕನಾದ ಮೊಳಗಿಸುವ ಮೂಲಕ ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯಪಾಲರು “ಮಹಾಶಿವರಾತ್ರಿ ಪಾವನ ಪರ್ವ. ಈ ಪರ್ವದಲ್ಲಿಎಲ್ಲರಿಗೂ ಮಹಾಶಿವ ಒಳ್ಳೆಯದು ಮಾಡಲಿ. ನಾನು ವಿಶ್ವ ಪ್ರಸಿದ್ಧ ಮಹಾಕಾಲ ದೇಗುಲವಿರುವ ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯವನು. ಭಾರತೀಯರು ವಿಶ್ವಬಂಧುತ್ವದ ‍ಪರಿ‍ಪಾಲಕರು, ಸಮತಾವಾದಿಗಳು, ಧರ್ಮ, ಸಂಸ್ಕೃತಿಯ ಬಗ್ಗೆ ಅಪಾರ ಶ್ರದ್ಧೆಯುಳ್ಳವರು. ಈ ವಿಚಾರಗಳನ್ನು ಯುವ ಸಮುದಾಯ ಪಾಲಿಸಬೇಕಾಗಿದೆ. ಈ ಭವ್ಯ ಕಾರ್ಯಕ್ರಮವನ್ನು ಸಚಿವ ಡಾ.ಕೆ.ಸುಧಾಕರ್ ಉತ್ತಮವಾಗಿ ಆಯೋಜಿಸಿದ್ದಾರೆ’” ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ ” ಜಗತ್ತಿನಲ್ಲಿಯೇ ಅದ್ಭುತವಾದ ಚರಿತ್ರೆ ಹೊಂದಿರುವ ಶಿವನನ್ನು ಬಹಳಷ್ಟ ಮಂದಿ ಲಯ ಎನ್ನುವರು. ಲಯ ಮತ್ತು ಸೃಷ್ಟಿ ಎರಡು ಶಿವನ ರೂಪಗಳಾದರೆ ಮೂರನೇ ಕಣ್ಣು ರುದ್ರಾವತಾರ.ಕಣ್ಣು ಮುಚ್ಚಿ ಧ್ಯಾನ ಮಾಡುತ್ತಲೇ ಜಗತ್ತಿನ ಆಗುಹೋಗುಗಳನ್ನು ಶಿವ ಕಾಣುತ್ತಾನೆ. ನಂದಿಬೆಟ್ಟದ ತಪ್ಪಲಿನಲ್ಲಿರುವ ಐತಿಹಾಸಿಕ ಪ್ರಸಿದ್ಧ ಭೋಗ ನಂದೀಶ್ವರ ದೇವಾಲಯ ಜೀರ್ಣೋದ್ಧಾರ ಆಗಲು ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿ ಅಭಿವೃದ್ಧಿ ಗೊಳಿಸುತ್ತೇವೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಸಚಿವ ಎಂ.ಟಿ.ಬಿ.ನಾಗರಾಜ್ ಮಾತ ನಾಡಿದರು. ಜಿಲ್ಲಾಧಿಕಾರಿ ಆರ್.ಲತಾ, ಸತ್ಯಸಾಯಿ ಆಶ್ರಮದ ಮಧುಸೂದನ ಸಾಯಿ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಸಚಿವ ಬಿ.ಎ. ಬಸವರಾಜು, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಉಪಸ್ಥಿತರಿದ್ದರು.

- Advertisement -

RELATED ARTICLES
- Advertisment -

Most Popular

Karnataka

India

You cannot copy content of this page