ಬಾಂಗ್ಲಾದೇಶದಲ್ಲಿ (Bangladesh) ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸೆ ಮತ್ತು ದೌರ್ಜನ್ಯದ ಕುರಿತು ಧ್ವನಿ ಎತ್ತಿದ್ದ ಹಿಂದೂ ಪರ ವಕೀಲ (Hindu lawyer) ಹಾಗೂ ಇಸ್ಕಾನ್ ಅರ್ಚಕ (ISKCON priest) ಚಿನ್ಮೋಯ್ ಕೃಷ್ಣ ದಾಸ್ (Chinmoy Krishna Das) ಬ್ರಹ್ಮಚಾರಿ ಅವರನ್ನು ಬಂಧಿಸಲಾಗಿದೆ. ಇದರಿಂದ ಹಿಂದೂ ಹೋರಾಟಗಾರರ ಆಕ್ರೋಶ ಹೆಚ್ಚಾಗಿದೆ.
ಚಿನ್ಮೋಯ್ ಕೃಷ್ಣ ದಾಸ್ ಬ್ರಹ್ಮಚಾರಿ ಅವರು ಬಾಂಗ್ಲಾದೇಶದಲ್ಲಿ ಹಿಂದೂಗಳ ಹಕ್ಕುಗಳನ್ನು ರಕ್ಷಿಸುವ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಅವರು ಢಾಕಾದಲ್ಲಿ ನಡೆದ ಒಂದು ಹಿಂದೂ ರ್ಯಾಲಿಯಲ್ಲಿ ಭಾಗವಹಿಸಿದ್ದರು ಮತ್ತು ಹಿಂದೂಗಳ ಮೇಲೆ ದೌರ್ಜನ್ಯದ ಬಗ್ಗೆ ಧ್ವನಿ ಎತ್ತಿದ್ದರು. ಇದರ ಬೆನ್ನಲ್ಲೇ ಅವರನ್ನು ಢಾಕಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಭದ್ರತಾ ಪಡೆಗಳು ದಾಸ್ ಅವರನ್ನು ಖಾಸಗಿ ವಾಹನದಿಂದ ತೆಗೆದು, ಪೊಲೀಸ್ ವಾಹನದಲ್ಲಿ ಬಂಧಿಸಿ ಇಲ್ಲಿನ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿವೆ ಎಂದು ವರದಿಯಾಗಿದೆ. ಈ ಘಟನೆ ಭಾರತ ಮತ್ತು ಬಾಂಗ್ಲಾದೇಶದಲ್ಲಿ ಚರ್ಚೆಗೆ ಕಾರಣವಾಗಿದೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗಳು ರಾಜಕೀಯ ಕಾರಣಗಳಿಂದ ಹುಟ್ಟಿವೆ ಎಂದು ಮುಹಮ್ಮದ್ ಯೂನಸ್, ಬಾಂಗ್ಲಾದೇಶದ ಮುಖ್ಯ ಸಲಹೆಗಾರರು ಹೇಳಿದ್ದಾರೆ.