Saturday, July 27, 2024
HomeKarnatakaBengaluru UrbanCinema Theatre ಗಳಲ್ಲಿ ಶೇ 100 ಆಸನಗಳ ಭರ್ತಿಗೆ ತಜ್ಞರ ಜೊತೆ ಚರ್ಚಿಸಿ ಅನುಮತಿ

Cinema Theatre ಗಳಲ್ಲಿ ಶೇ 100 ಆಸನಗಳ ಭರ್ತಿಗೆ ತಜ್ಞರ ಜೊತೆ ಚರ್ಚಿಸಿ ಅನುಮತಿ

Bengaluru, Karnataka : Cinema Movie Theatre ಗಳಲ್ಲಿ 100% ಆಸನಗಳ ಭರ್ತಿಗೆ ಅನುಮತಿ ನೀಡಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ (Karnataka Film Chamber of Commerce) ಪದಾಧಿಕಾರಿಗಳು ವಿಧಾನಸೌಧದಲ್ಲಿ ಬುಧವಾರ ಕಂದಾಯ ಸಚಿವ ಆರ್‌.ಅಶೋಕ (Minister of Revenue R. Ashoka) ರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಸಭೆಯ ಬಳಿಕ ಮಾತನಾಡಿದ ಕಂದಾಯ ಸಚಿವ ಆರ್‌.ಅಶೋಕ್ “ವಾಣಿಜ್ಯ ಮಂಡಳಿ ನಿಯೋಗ ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಶೇ 100 ರಷ್ಟು ಆಸನಗಳ ಭರ್ತಿಗೆ ಸಂಬಂಧಿಸಿದಂತೆ ಸಮಗ್ರ ವರದಿ ಒಳಗೊಂಡ ಮನವಿ ನೀಡುವಂತೆ ತಿಳಿಸಿದ್ದು ಅದನ್ನು ಇವತ್ತು ಸಲ್ಲಿಸಿದ್ದಾರೆ. ಬೇರೆ ರಾಜ್ಯಗಳಲ್ಲಿ ಶೇ 100 ಚಿತ್ರ ಮಂದಿರ ಭರ್ತಿಗೆ ಅನುಮತಿ ಇದೆ. ಚಿತ್ರರಂಗ ಕಷ್ಟದಲ್ಲಿದ್ದು ಸಾಕಷ್ಟು ಚಲನಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ. ಮನವಿಯನ್ನು ತಜ್ಞರ ಮುಂದಿಟ್ಟು ಬಳಿಕ ಕ್ರಮ ತೆಗೆದುಕೊಳ್ಳುತ್ತೇವೆ. ಈ ಎಲ್ಲ ವಿಚಾರಗಳ ಬಗ್ಗೆ ಮುಖ್ಯಮಂತ್ರಿ ಜತೆ ಮಾತನಾಡುತ್ತೇನೆ” ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

Karnataka

India

You cannot copy content of this page