Friday, May 17, 2024
Homeಉಜ್ಜಯಿನಿಯಲ್ಲಿ ಭಾರತದ ಚೊಚ್ಚಲ ಸ್ವಚ್ಛ ಮತ್ತು ಆರೋಗ್ಯಕರ ಆಹಾರ ಬೀದಿ ಪ್ರಾರಂಭ

ಉಜ್ಜಯಿನಿಯಲ್ಲಿ ಭಾರತದ ಚೊಚ್ಚಲ ಸ್ವಚ್ಛ ಮತ್ತು ಆರೋಗ್ಯಕರ ಆಹಾರ ಬೀದಿ ಪ್ರಾರಂಭ

Ujjain, Madhya Pradesh : ಉಜ್ಜಯಿನಿಯ ಮಹಾಕಲ್ ಲೋಕದ ನೀಲಕಂಠ ವನದಲ್ಲಿ ‘ಪ್ರಸಾದಂ’ (Prasadam) ಎಂಬ ಭಾರತದ ಚೊಚ್ಚಲ ಸ್ವಚ್ಛ ಮತ್ತು ಆರೋಗ್ಯಕರ ಆಹಾರ ಬೀದಿಯನ್ನು ಪ್ರಾರಂಭಿಸಲಾಯಿತು. ಮಹಾಕಾಳೇಶ್ವರ ದೇವಸ್ಥಾನದ ಬಳಿ 939 ಚದರ ಮೀಟರ್‌ಗಳಲ್ಲಿ ಹರಡಿರುವ ‘ಪ್ರಸಾದಂ’ನಲ್ಲಿ ಒಟ್ಟು 17 ಅಂಗಡಿಗಳಿದ್ದು ಪ್ರತಿಯೊಂದೂ ವಿಶಿಷ್ಟವಾದ ಪಾಕಶಾಲೆಯ ಅನುಭವವನ್ನು ನೀಡುತ್ತದೆ. ಮಳಿಗೆಗಳೊಂದಿಗೆ ಸುಸಜಿತವಾದ ಮಕ್ಕಳ ಆಟದ ಜಾಗ, ಕುಡಿಯುವ ನೀರಿನ ಸೌಲಭ್ಯಗಳು, CCTV ಕಣ್ಗಾವಲು, ಸಾಕಷ್ಟು ಪಾರ್ಕಿಂಗ್, ಸಾರ್ವಜನಿಕ ಅನುಕೂಲಗಳು ಮತ್ತು ವಿಶಾಲವಾದ ಆಸನಗಳಂತಹ ಸೌಕರ್ಯಗಳನ್ನು ಇಲ್ಲಿ ಒದಗಿಸಲ್ಲಾಗುತ್ತದೆ.

Ujjain India First Hygienic Chat Street Prasadam

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಕಾರ್ಯಕ್ರಮದಲ್ಲಿ ” ಶುದ್ಧ ಮತ್ತು ಸುರಕ್ಷಿತ ಆಹಾರವನ್ನು ಪ್ರವಾಸಿಗರಿಗೆ ನೀಡುವ ಮತ್ತು ಸ್ಥಳೀಯ ಆಹಾರವನ್ನು ಉತ್ತೇಜಿಸಲು ಪ್ರಸಾದಂ ಕಾರ್ಯಕ್ರಮ ಹೊಂದಿದೆ” ಎಂದು ತಿಳಿಸಿದರು. ಮಾನಸಿಕ ಆರೋಗ್ಯ ತಪಾಸಣೆಗಾಗಿ Mannhit ಅಪ್ಲಿಕೇಶನ್, FSSAI ನಿಂದ ಮನೆಯಲ್ಲಿಯೇ ಆಹಾರ ಕಲಬೆರಕೆ ಪರೀಕ್ಷೆಗಳಿಗಾಗಿ ‘The DART Book’ ಮೊಬೈಲ್ ಆಹಾರ ಪರೀಕ್ಷಾ ವ್ಯಾನ್, ‘Food Safety on Wheels’ ಅನ್ನು ಸಹ ಕಾರ್ಯಕ್ರಮದಲ್ಲಿ ಪ್ರಾರಂಭಿಸಲಾಯಿತು.

Ujjain India First Hygienic Chat Street Prasadam

ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ. ಮೋಹನ್ ಯಾದವ್, ಉಪಮುಖ್ಯಮಂತ್ರಿ ರಾಜೇಂದ್ರ ಶುಕ್ಲಾ, ಸಾರ್ವಜನಿಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವ ನರೇಂದ್ರ ಶಿವಾಜಿ ಪಟೇಲ್ ಮತ್ತು ಲೋಕಸಭಾ ಸದಸ್ಯ ಅನಿಲ್ ಫಿರೋಜಿಯಾ ಭಾಗವಹಿಸಿದ್ದರು.

For Daily Updates WhatsApp ‘HI’ to 7406303366

RELATED ARTICLES

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.
Captcha verification failed!
CAPTCHA user score failed. Please contact us!
- Advertisment -

Most Popular

Karnataka

India

You cannot copy content of this page