Home Karnataka Karnatakaದಲ್ಲಿ Rohit Vemula Act ಜಾರಿ ಮಾಡುವ ನಿರ್ಧಾರ: Siddaramaiah

Karnatakaದಲ್ಲಿ Rohit Vemula Act ಜಾರಿ ಮಾಡುವ ನಿರ್ಧಾರ: Siddaramaiah

Chief Minister Siddaramaiah

Bengaluru: ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ಅವರು, ಕರ್ನಾಟಕದಲ್ಲಿ (Karnataka) ರೋಹಿತ್ ವೇಮುಲಾ ಕಾಯ್ದೆ ((Rohith Vemula Act )ಜಾರಿಗೆ ತರಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ. ಈ ಕಾಯ್ದೆ ಆದಷ್ಟು ಬೇಗ ಜಾರಿಗೆ ಬರುತ್ತದೆ ಎಂದು ಅವರು ತಿಳಿಸಿದರು. ಈ ನಿರ್ಧಾರಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಅವರು ಸಮಾಜಿಕ ನ್ಯಾಯ ಹಾಗೂ ಬದ್ಧತೆಯ ಬಗ್ಗೆ ಪತ್ರದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಯಾವುದೇ ವಿದ್ಯಾರ್ಥಿಯು ಜಾತಿ, ವರ್ಗ ಅಥವಾ ಧರ್ಮದ ಆಧಾರದ ಮೇಲೆ ತಾರತಮ್ಯ ಅನುಭವಿಸಬಾರದು ಎಂದು ಹೇಳಿದರು. ಈ ಕಾಯ್ದೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಸಮಾನತೆ ಮತ್ತು ಸಹಾನುಭೂತಿಯ ಕನಸಿಗೆ ಹೆಜ್ಜೆಯಾಗುತ್ತದೆ ಎಂದರು.

ರಾಹುಲ್ ಗಾಂಧಿ ಅವರು ಪತ್ರದಲ್ಲಿ ಅಂಬೇಡ್ಕರ್ ಅವರು ತಮ್ಮ ಜೀವನದಲ್ಲಿ ಅನುಭವಿಸಿದ ತಾರತಮ್ಯದ ಕುರಿತು ವಿವರಿಸಿದ್ದಾರೆ — ಹಸಿವಿನಿಂದ ಮಲಗಿದ ದಿನಗಳು, ನೀರಿಲ್ಲದ ದಿನಗಳು, ಅಸ್ಪೃಶ್ಯತೆಗೆ ಕಾರಣವಾಗಿ ಬದುಕಿದ ಕಷ್ಟಗಳು ಮುಂತಾದವು. ಅಲ್ಲದೆ, ಅಂಬೇಡ್ಕರ್ ಅವರು ವಿದ್ಯಾರ್ಥಿಯಾಗಿ ಅನುಭವಿಸಿದ ತೊಂದರೆಗಳನ್ನೂ ವಿವರಿಸಿದ್ದಾರೆ: ಅಸ್ಪೃಶ್ಯನೆಂದು ಕೂರಲು ಬಿಡದ ತರಗತಿ ಪರಿಸರ, ತಾರತಮ್ಯದ ವ್ಯಥೆ, ಇತ್ಯಾದಿ. ಇಂತಹ ಅವಮಾನವನ್ನು ಇನ್ನು ಮುಂದೆ ಯಾವುದೇ ವಿದ್ಯಾರ್ಥಿ ಅನುಭವಿಸಬಾರದು ಎಂಬುದು ರಾಹುಲ್ ಗಾಂಧಿಯವರ ಸಂದೇಶ.

ಅವರು ರೋಹಿತ್ ವೇಮುಲಾ, ಪಾಯಲ್ ತಾನ್ವಿ ಮತ್ತು ದರ್ಶನ್ ಸೊಲಂಕಿ ಅವರಂತಹ ಪ್ರತಿಭಾವಂತ ವಿದ್ಯಾರ್ಥಿಗಳ ದುರ್ಘಟನೆಗಳನ್ನು ಉಲ್ಲೇಖಿಸಿ, ಇವು ಇನ್ನೆಂದೂ ಪುನರಾವೃತವಾಗಬಾರದು ಎಂದಿದ್ದಾರೆ. ಜಾತಿ ತಾರತಮ್ಯ ನಿಲ್ಲಿಸಲು ಶಿಕ್ಷಣವೇ ಮುಖ್ಯ ಮಾರ್ಗ ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.

ರೋಹಿತ್ ವೇಮುಲಾ ಯಾರು?

ರೋಹಿತ್ ವೇಮುಲಾ ಅವರು ಹೈದರಾಬಾದ್ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಪಿಹೆಚ್ಡಿ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿ. 2016ರ ಜನವರಿ 17ರಂದು ಆತ್ಮಹತ್ಯೆ ಮಾಡಿಕೊಂಡರು. ಆತ್ಮಹತ್ಯೆಗೆ ಮುನ್ನ ಅವರು ಬರೆದ ಡೆತ್ ನೋಟ್‌ನಲ್ಲಿ ತಾವು ಅನುಭವಿಸಿದ ದುಃಖ, ವ್ಯಥೆಗಳನ್ನು ವಿವರಿಸಿದ್ದಾರೆ. ಅವರ ಸಾವಿನಿಂದ ದೇಶದಾದ್ಯಂತ ಜಾತಿ ತಾರತಮ್ಯದ ವಿರುದ್ಧ ಆಕ್ರೋಶ ವ್ಯಕ್ತವಾಯಿತು.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version