Doddaballapura, Bengaluru Rural : JDS ಭದ್ರಕೋಟೆಯಾಗಿದ್ದ ತೂಬಗೆರೆ (Tubagere) ತಾಲ್ಲೂಕಿನ ಹಾಡೋನಹಳ್ಳಿ (Hadonahalli) ರೈತ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ (Election) Congress ಬೆಂಬಲಿತ ಆಭ್ಯರ್ಥಿಗಳಾದ ಎಂ.ಮುನೇಗೌಡ, ಹನುಮಂತರಾಯಪ್ಪ, ಟಿ.ವೆಂಕಟೇಶ್, ಎನ್.ಮುನಿರಾಜು, ಎಚ್.ಎಸ್.ಪಿಳ್ಳಪ್ಪ, ಜಿ.ಕೆ.ಶ್ರೀಧರ್, ಗಂಗಲಕ್ಷ್ಮಮ್ಮ,ಅನಸೂಯಮ್ಮ, ರಾಮನಾಯ್ಕ, ಲೋಕನಾಥ್, ಎಚ್.ನಂಜೇಗೌಡ, ಎನ್.ವಿಜಯಕುಮಾರ್ (12 ಜನ) ಆಯ್ಕೆಯಾಗಿ ಹಾಡೋನಹಳ್ಳಿಯಲ್ಲಿ ಜೆಡಿಎಸ್‌ಗೆ ತೀವ್ರ ಹಿನ್ನಡೆಯಾಗಿದೆ.
ದೌರ್ಜನ್ಯದ ರಾಜಕಾರಣಕ್ಕೆ ಅಂತ್ಯ ಹಾಡಲು ಈ ಚುನಾವಣೆ ಮುನ್ನುಡಿ ಬರೆದಿದ್ದು ಇನ್ನು ಮುಂದಾದರೂ ಕೆಲವರು ದೌರ್ಜನ್ಯದ ರಾಜಕಾರಣ ಬಿಟ್ಟು ಪ್ರಜಾಪ್ರಭುತ್ವ ಮತದಾನದ ಮೂಲಕ ಆಯ್ಕೆಯಾಗಲು ಪ್ರಯತ್ನಿಸಬೇಕು ಎಂದು KMF ನಿರ್ದೇಶಕ ಬಿ.ಸಿ.ಆನಂದ್‌ಕುಮಾರ್ ಹೇಳಿದರು.
ಕೆಪಿಸಿಸಿ ಸದಸ್ಯ ಎಸ್.ಆರ್.ಮುನಿರಾಜು, ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಎನ್.ರಂಗಪ್ಪ, ಯುವ ಕಾಂಗ್ರೆಸ್ ಅಧ್ಯಕ್ಷ ಜಿ.ಕೆ.ಶ್ರೀಧರ್, ಮುಖಂಡರಾದ ಜಿ.ಎಂ.ಚೆನ್ನಪ್ಪ, ತಿ.ರಂಗರಾಜ್, ವಿ.ಕೃಷ್ಣಯ್ಯ, ಚಿದಾನಂದ, ಆಂಜಿನಪ್ಪ, ತೂಬಗೆರೆ ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಮುನೇಗೌಡ ಉಪಸ್ಥಿತರಿದ್ದರು.