
ಇತ್ತೀಚಿನ ದಿನಗಳಲ್ಲಿ ಮಹಿಳೆಯರ ಮೇಲಿನ ಹಿಂಸಾಚಾರ (rape) ಹೆಚ್ಚಾಗುತ್ತಿರುವುದು ಸರ್ಕಾರ ಮತ್ತು ಪೊಲೀಸರಿಗೆ ದೊಡ್ಡ ಸವಾಲಾಗಿದ್ದು, ನಾಗರಿಕರಲ್ಲಿ ಭಯ ಮತ್ತು ಕಳವಳದ ವಾತಾವರಣವನ್ನು ಉಂಟುಮಾಡಿದೆ.
ಮಹಾರಾಷ್ಟ್ರದ (Maharashtra) ಸತಾರಾದ ಇಬ್ಬರು ಯುವಕರು ಥೈಲೆಂಡ್ (Thailand) ಪ್ರವಾಸ ಹೋಗಿ ಜರ್ಮನ್ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ ಆರೋಪದಡಿ ಬಂಧಿತರಾಗಿದ್ದಾರೆ. ಈ ಘಟನೆ ಸೂರತ್ ಥಾನಿ ಪ್ರಾಂತ್ಯದ ರಿನ್ ಬೀಚ್ ಪ್ರದೇಶದಲ್ಲಿ ನಡೆದಿದ್ದು, ಮಹಿಳೆ ಕೊಹ್ ಫಂಗನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸಿಸಿಟಿವಿ ದೃಶ್ಯಗಳು ಮತ್ತು ಸಾಕ್ಷಿಗಳ ಹೇಳಿಕೆಗಳ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯ್ ದಾದಾಸಾಹೇಬ್ ತಮ್ಮ ತಪ್ಪನ್ನು ಒಪ್ಪಿಕೊಂಡರೆ, ರಾಹುಲ್ ಬಾಳಾಸಾಹೇಬ್ ಮಾತ್ರ ಭಾಗಿಕವಾಗಿ ಒಪ್ಪಿಕೊಂಡಿದ್ದಾರೆ.
ಈ ಅಪರಾಧಕ್ಕೆ 4 ರಿಂದ 20 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ 10.33 ಲಕ್ಷ ರೂ. ದಂಡ ವಿಧಿಸುವ ಸಾಧ್ಯತೆ ಇದೆ.
ಈ ಘಟನೆ ಮಾರ್ಚ್ 14ರಂದು ಬೆಳಗಿನ ಜಾವ 4.50ಕ್ಕೆ ಹಾದ್ ರಿನ್ ಬೀಚ್‌ನಲ್ಲಿ ನಡೆದಿದೆ. ಮಹಿಳೆ ಕುಡಿದ ಮತ್ತಿನಲ್ಲಿ ಇದ್ದ ಕಾರಣ ಆರೋಪಿಗಳನ್ನು ತಕ್ಷಣ ಗುರುತಿಸಲು ಸಾಧ್ಯವಾಗಿರಲಿಲ್ಲ. ಆದರೆ ಭದ್ರತಾ ದೃಶ್ಯಾವಳಿಗಳ ಪರಿಶೀಲನೆಯ ನಂತರ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಪ್ರಾರಂಭದಲ್ಲಿ ಆರೋಪಿಗಳು ತಪ್ಪನ್ನು ಒಪ್ಪಿಕೊಳ್ಳಲು ನಿರಾಕರಿಸಿದರು, ಆದರೆ ನಂತರ ಒಪ್ಪಿಕೊಂಡಿದ್ದಾರೆ.