
ಮಹಾರಾಷ್ಟ್ರ ಸರ್ಕಾರವು ಓಲಾ ಎಲೆಕ್ಟ್ರಿಕ್ 75 ಷೋರೂಮ್ ಗಳನ್ನು (Ola Electric Scooter) ಸರಿಯಾದ ವ್ಯಾಪಾರ ಪರವಾನಗಿಯ ಕೊರತೆಯಿಂದ ಮುಚ್ಚಲು ಆದೇಶಿಸಿದೆ. 146 ಓಲಾ ಎಲೆಕ್ಟ್ರಿಕ್ ಮಳಿಗೆಗಳಲ್ಲಿ 121 ಮಳಿಗೆಗಳು ಸರಿಯಾದ ಪರವಾನಗಿಗಳಿಲ್ಲದೆ ಕಾರ್ಯನಿರ್ವಹಿಸುತ್ತಿದ್ದವು, ಹೀಗಾಗಿ ಆವಶ್ಯಕ ಕ್ರಮಗಳನ್ನು ಕೈಗೊಳ್ಳಲು ಮಹಾರಾಷ್ಟ್ರ ಸಾರಿಗೆ ಇಲಾಖೆ ನಿರ್ಧರಿಸಿದೆ.
ಭವಿಷ್ ಅಗರ್ವಾಲ್ ಅವರ ಓಲಾ ಎಲೆಕ್ಟ್ರಿಕ್ ಕಂಪನಿ ಎಲೆಕ್ಟ್ರಿಕ್ ವಾಹನಗಳ ಜನಪ್ರಿಯತೆಯ ನಡುವಿನಲ್ಲಿ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಮಹಾರಾಷ್ಟ್ರದ 146 ಓಲಾ ಎಲೆಕ್ಟ್ರಿಕ್ ಷೋರೂಮ್ಗಳಲ್ಲಿ 121 ಮಳಿಗೆಗಳು ವ್ಯಾಪಾರ ಪರವಾನಗಿಯಿಲ್ಲದೆ ಕಾರ್ಯನಿರ್ವಹಿಸುತ್ತಿವೆ ಮತ್ತು 75 ಷೋರೂಮ್ ಗಳನ್ನು ಮುಚ್ಚಲು ಸೂಚನೆ ನೀಡಲಾಗಿದೆ.
ಮಹಾರಾಷ್ಟ್ರದ ಜಂಟಿ ಸಾರಿಗೆ ಆಯುಕ್ತರು, ಯಾವುದೇ ಲೈಸೆನ್ಸ್ ಇಲ್ಲದ ಷೋರೂಮ್ ಗಳನ್ನು 24 ಗಂಟೆಗಳ ಒಳಗೆ ಮುಚ್ಚುವಂತೆ ಹೇಳಿದ್ದಾರೆ. ಇದರೊಂದಿಗೆ, ಅವರಿಗೆ ಕಾನೂನುಬಾಹಿರವಾಗಿ ವಾಹನಗಳನ್ನು ಮಾರಾಟ ಮಾಡಲು ಅಥವಾ ಪ್ರದರ್ಶಿಸಲು ಅವಕಾಶವಿಲ್ಲ.
ಭಾರತದಲ್ಲಿ ಟೆಸ್ ಡ್ರೈವ್ ಮತ್ತು ವಾಹನಗಳ ಮಾರಾಟಕ್ಕೆ ಸರಿಯಾದ ವ್ಯಾಪಾರ ಪರವಾನಗಿ ಅವಶ್ಯಕವಾಗಿದೆ. ಇದರಿಂದ, ಓಲಾ ಎಲೆಕ್ಟ್ರಿಕ್ ನ ಮಾರಾಟ ಮತ್ತು ಬ್ರ್ಯಾಂಡ್ ಇಮೇಜ್ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ.