Vishakapatnam, Andhra Pradesh : Google ಸಂಸ್ಥೆಯ ಮುಖ್ಯಸ್ಥ ಸುಂದರ್ ಪಿಚೈ ತಮಿಳುನಾಡಿನವರಾಗಿದ್ದರೂ, ಅಂತ ದೊಡ್ಡ ಹೂಡಿಕೆ ಆ ರಾಜ್ಯಕ್ಕೆ ಬರದೆ ಆಂಧ್ರಪ್ರದೇಶದ ಪಾಲಾಗಿದೆ ಎಂಬುದು ಈಗ ಚರ್ಚೆಯ ವಿಷಯವಾಗಿದೆ. ತಮಿಳುನಾಡಿನ ವಿರೋಧ ಪಕ್ಷ AIADMK, ಆಡಳಿತ ಪಕ್ಷ DMK ಸರ್ಕಾರ ಈ ಹೂಡಿಕೆಯನ್ನು ಸೆಳೆಯಲು ವಿಫಲವಾಗಿದೆ ಎಂದು ಟೀಕಿಸಿದೆ.
ಆಂಧ್ರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ನಾರಾ ಲೋಕೇಶ್ ಈ ಕುರಿತು ಪ್ರತಿಕ್ರಿಯೆ ನೀಡಿ, “ಸುಂದರ್ ಪಿಚೈ ಭಾರತವನ್ನು ಆಯ್ಕೆ ಮಾಡಿಕೊಂಡಿದ್ದಾರೆ. Google AI ಹಬ್ ಆಂಧ್ರಕ್ಕೆ ವೇಗದ ಡಿಜಿಟಲ್ ವಿಕಾಸ ಮತ್ತು ಉದ್ಯೋಗಾವಕಾಶ ತರಲಿದೆ,” ಎಂದಿದ್ದಾರೆ.
ಇನ್ನೊಂದು ಕಡೆ, ತಮಿಳುನಾಡಿನಲ್ಲಿ Apple ಸೇರಿದಂತೆ ಹಲವಾರು ಪ್ರಮುಖ ಕಂಪನಿಗಳು ಉತ್ಪಾದನಾ ಘಟಕಗಳನ್ನು ಹೊಂದಿವೆ ಎಂದು ಸರ್ಕಾರ ಹೇಳಿದೆ. ಆದರೂ Google ಹೂಡಿಕೆಗೆ ರಾಜ್ಯ ಕೈತಪ್ಪಿದೆ ಎಂದು ವಿರೋಧ ಪಕ್ಷ ಗಂಭೀರ ಟೀಕೆ ಮಾಡಿದೆ.







