
ನೀವು ಯಾವಾಗಲಾದರೂ ಮಾವಿನ ಹಣ್ಣನ್ನು ತಿಂದಿರಬಹುದು, ಆದರೆ ಮಾವಿನ ಹೂವನ್ನು (Mango Blossom) ಸೇವಿಸಿದಿರುವಿರಾ? ಮಾವು ಹಣ್ಣು ಮಾತ್ರವಲ್ಲ, ಅದರ ಎಲೆ, ತೊಗಟೆ, ಹಾಗೂ ಹೂವಿನಲ್ಲಿಯೂ ಅನೇಕ ಔಷಧೀಯ ಗುಣಗಳು ಇವೆ ಎಂಬ ನಂಬಿಕೆ ಇದೆ. ಹೀಗಾಗಿ ಈಗಲೂ ಇವುಗಳನ್ನು ಆಯುರ್ವೇದ ಔಷಧಗಳಲ್ಲಿ ಬಳಸಲಾಗುತ್ತಿದೆ.
ಮಾವಿನ ಹೂವಿನ ಆರೋಗ್ಯ ಪ್ರಯೋಜನಗಳು
- ಮಧುಮೇಹ ನಿಯಂತ್ರಣಕ್ಕೆ: ಮಾವಿನ ಹೂವಿನಲ್ಲಿ ಫೈಬರ್ ಅಧಿಕವಾಗಿರುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ.
- ಚರ್ಮದ ಸಮಸ್ಯೆಗೆ ಪರಿಹಾರ: ಉರಿಯೂತ ಹಾಗೂ ಸೂಕ್ಷ್ಮಜೀವಿ ನಾಶಕ ಗುಣವಿರುವ ಹೂವು, ಮೊಡವೆ ಮುಂತಾದ ಚರ್ಮದ ತೊಂದರೆಗಳನ್ನು ದೂರ ಮಾಡುತ್ತದೆ.
- ಜೀರ್ಣಕ್ರಿಯೆಗೆ ಸಹಾಯ: ಅಜೀರ್ಣ, ಉಬ್ಬರ ಮುಂತಾದ ಸಮಸ್ಯೆಗಳಿಗೆ ಮಾವಿನ ಹೂವು ಒಳ್ಳೆಯ ಪರಿಹಾರ. ಜೀರ್ಣಕ್ರಿಯೆ ಸುಧಾರಿಸುತ್ತದೆ.
- ಸಂಧಿವಾತ, ಕೀಲು ನೋವಿಗೆ ಲಾಭಕಾರಿ: ಉರಿಯೂತ ನಿವಾರಕ ಗುಣಗಳಿರುವ ಹೂವು ಕೀಲುಗಳ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ.
- ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ: ಮಾವಿನ ಹೂವು ದೇಹದ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸಿ ರೋಗಗಳಿಂದ ರಕ್ಷಿಸುತ್ತದೆ.
- ಉಸಿರಾಟದ ಸಮಸ್ಯೆಗೆ ಉಪಯುಕ್ತ: ಕೆಮ್ಮು, ಅಸ್ತಮಾ, ಬ್ರಾಂಕೈಟಿಸ್ ಮುಂತಾದ ಉಸಿರಾಟ ಸಮಸ್ಯೆಗಳಲ್ಲಿ ಹೂವು ಉಪಯೋಗಿಯಾಗುತ್ತದೆ.
- ತೂಕ ಇಳಿಸುವವರಿಗೆ ಸಹಾಯ: ಫೈಬರ್ ಹೆಚ್ಚಾಗಿರುವುದರಿಂದ ಹೊಟ್ಟೆ ತುಂಬಿರುವ ಭಾವವನ್ನು ನೀಡುತ್ತದೆ ಮತ್ತು ತೂಕ ಇಳಿಸಲು ಸಹಕಾರಿಯಾಗುತ್ತದೆ.
- ಮೂಗಿನ ದಟ್ಟಣೆಗೆ ಪರಿಹಾರ: ಬೇಸಿಗೆಯಲ್ಲಿ ಮೂಗಿನ ದಟ್ಟಣೆಯ ತೊಂದರೆ ಬಂದರೆ, ಮಾವಿನ ಹೂವಿನ ಪರಿಮಳದಿಂದ ಅನುಕೂಲವಾಗಬಹುದು.
- ಮಾನಸಿಕ ಒತ್ತಡ ನಿವಾರಣೆ: ಹೂವಿನ ಪೋಷಕಾಂಶಗಳು ಒತ್ತಡ, ಆತಂಕ ಕಡಿಮೆ ಮಾಡುತ್ತವೆ ಮತ್ತು ಮನಸ್ಸಿಗೆ ತಾಜಾತನ ನೀಡುತ್ತವೆ.
ಸೂಚನೆ: ಈ ಮಾಹಿತಿಯು ಸಾಮಾನ್ಯ ಆರೋಗ್ಯ ಮಾಹಿತಿ ಮಾತ್ರ. ದಯವಿಟ್ಟು ಯಾವುದೇ ಆರೋಗ್ಯ ಸಮಸ್ಯೆಗೆ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ.