
ಕಪ್ಪು ಅಕ್ಕಿಯು (Black Rice) ಸಾಮಾನ್ಯ ಅಕ್ಕಿಗಳಿಗಿಂತ ಹೆಚ್ಚು ಆರೋಗ್ಯಕರವಾಗಿದೆ. ಇದರಲ್ಲಿ ನಾರಿನಾಂಶ, ಪ್ರೋಟೀನ್, ಕಬ್ಬಿಣ, ಫೈಬರ್ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಹೆಚ್ಚಿರುತ್ತವೆ. ಹಲವು ವೈದ್ಯರು ಹಾಗೂ ಅಧ್ಯಯನಗಳು ಇದರ ಆರೋಗ್ಯ ಲಾಭಗಳನ್ನು ದೃಢಪಡಿಸಿವೆ.
ಮಧುಮೇಹ ನಿಯಂತ್ರಣಕ್ಕೆ ಸಹಾಯ: ಕಪ್ಪು ಅಕ್ಕಿಯಲ್ಲಿ ಇರುವ ಆಂಥೋಸಯಾನಿನ್ ಎಂಬ ತತ್ವಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತವೆ. ಇದು ಇನ್ಸುಲಿನ್ ಕ್ರಿಯಾಶೀಲತೆಯನ್ನು ಸುಧಾರಿಸುತ್ತವೆ ಹಾಗೂ ದೀರ್ಘಕಾಲಿಕ ಉರಿಯೂತ ತಡೆಯುತ್ತವೆ.
ಕೊಲೆಸ್ಟ್ರಾಲ್ ನಿಯಂತ್ರಣ: ಈ ಅಕ್ಕಿಯಲ್ಲಿರುವ ಆಹಾರನಾರಿನ ಅಂಶ, ಕೆಟ್ಟ ಕೊಲೆಸ್ಟ್ರಾಲ್ (LDL) ತಗ್ಗಿಸಿ ಉತ್ತಮ ಕೊಲೆಸ್ಟ್ರಾಲ್ (HDL) ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಹೃದಯ ಆರೋಗ್ಯವನ್ನೂ ಕಾಪಾಡುತ್ತದೆ.
ಕ್ಯಾನ್ಸರ್ ವಿರುದ್ಧ ರಕ್ಷಣೆ: ಆಂಥೋಸಯಾನಿನ್ ತತ್ವಗಳು ಕೆಲವು ಕ್ಯಾನ್ಸರ್ ಗಳಿಗೆ ಪ್ರತಿರೋಧವಾಗಿ ಕೆಲಸ ಮಾಡುತ್ತವೆ. ಖಾಸಗಿ ಅಧ್ಯಯನಗಳು, ಕಪ್ಪು ಅಕ್ಕಿಯು ಸ್ತನ ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ ತಡೆಯಲು ಸಹಾಯ ಮಾಡುತ್ತದೆ ಎಂದು ತಿಳಿಸಿವೆ.
ತೂಕ ಕಡಿಮೆ ಮಾಡಲು ಸಹಕಾರಿ: ಕಪ್ಪು ಅಕ್ಕಿಯು ಹೊಟ್ಟೆ ತುಂಬಿದ ಭಾವ ನೀಡುತ್ತದೆ, ಹಸಿವು ಕಡಿಮೆ ಮಾಡುತ್ತದೆ ಮತ್ತು ಬೊಜ್ಜನ್ನು ಕರಗಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಇರುವ ಫೈಬರ್ ಮತ್ತು ಪ್ರೋಟೀನ್ ತೂಕ ಇಳಿವಿಗೆ ಸಹಕಾರಿಯಾಗಿದೆ.
ಕಣ್ಣಿನ ಆರೋಗ್ಯ: ಲೂಟೀನ್ ಮತ್ತು ಜಿಯಾಕ್ಸಾಂಥಿನ್ ಎನ್ನುವ ಕ್ಯಾರೊಟಿನಾಯ್ಡ್ ಗಳು ಕಪ್ಪು ಅಕ್ಕಿಯಲ್ಲಿ ಇದ್ದು, ಕಣ್ಣುಗಳನ್ನು ಹಾನಿಕಾರಕ ಬೆಳಕು ಹಾಗೂ ಫ್ರೀ ರ್ಯಾಡಿಕಲ್ಗಳಿಂದ ರಕ್ಷಿಸುತ್ತವೆ.
ಹೃದಯದ ಆರೋಗ್ಯಕ್ಕಾಗಿ: ಇದರಲ್ಲಿ ಇರುವ ಆ್ಯಂಟಿಆಕ್ಸಿಡೆಂಟ್‌ಗಳು ಮತ್ತು ಫ್ಲೇವನಾಯ್ಡ್ ಗಳು ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತವೆ.
ಸ್ನಾಯು ಬಲವರ್ಧನೆ: ಸಸ್ಯಜನ್ಯ ಪ್ರೋಟೀನ್ ಮತ್ತು ಅಮೈನೋ ಆಮ್ಲಗಳಿವೆ. ಇವು ದೇಹದ ರಚನೆ ಮತ್ತು ಸ್ನಾಯು ಬೆಳವಣಿಗೆಗೆ ಸಹಕಾರಿಯಾಗುತ್ತವೆ.
ದೇಹವನ್ನು ನಿರ್ವಿಷಗೊಳಿಸುತ್ತದೆ: ಆ್ಯಂಟಿಆಕ್ಸಿಡೆಂಟ್‌ಗಳ ಬಳಕೆಯಿಂದ ದೇಹದಲ್ಲಿನ ವಿಷಕಾರಿ ಅಂಶಗಳು ಹೊರ ಹೋಗುತ್ತವೆ. ಇದು ಯಕೃತ್ ಮತ್ತು ಮೆದುಳಿಗೆ ಸಹ ಉಪಕಾರಿಯಾಗುತ್ತದೆ.
ಎಷ್ಟು ಸೇವಿಸಬೇಕು?: ತಜ್ಞರು ಪ್ರಕಾರ ದಿನಕ್ಕೆ ಅರ್ಧ ಕಪ್ ಅಥವಾ ಕಾಲು ಕಪ್ ಬೇಯಿಸಿದ ಕಪ್ಪು ಅಕ್ಕಿ ಸೇವನೆ ಮಾಡಬಹುದಾಗಿದೆ. ಬೆಳಿಗ್ಗೆ ಉಪಹಾರದಲ್ಲಿ ಅಥವಾ ಮಧ್ಯಾಹ್ನ ಊಟದಲ್ಲಿ ಸೇವಿಸಿದರೆ ಉತ್ತಮ.
ಮಧುಮೇಹ ಸ್ನೇಹಿ ಆಹಾರ: ಕಪ್ಪು ಅಕ್ಕಿಯ ಗ್ಲೈಸೆಮಿಕ್ ಸೂಚ್ಯಂಕ ಕಡಿಮೆ ಇದ್ದು, ಇದು ಮಧುಮೇಹಿಗಳಿಗೂ ಅನುಕೂಲಕರವಾಗಿದೆ. ಇದರಿಂದ ಶರೀರದ ಶುಗರ್ ಮಟ್ಟ ಸಮತೋಲನವಾಗಿರುತ್ತದೆ.
ಸೂಚನೆ: ಈ ಲೇಖನದ ಮಾಹಿತಿ ವೈದ್ಯಕೀಯ ಸಲಹೆಯ ಬದಲಿಗೆ ಅಲ್ಲ. ಸೇವನೆ ಅಥವಾ ಆಹಾರ ಬದಲಾವಣೆ ಮಾಡುವುದು ಮೊದಲು ವೈದ್ಯರ ಸಲಹೆ ಪಡೆಯಿರಿ.