
ಹರ್ನಿಯಾ (Hernia) ಎಂಬುದು ದೇಹದ ಆಂತರಿಕ ಅಂಗ ಅಥವಾ ಕರುಳು, ದಪ್ಪ ಸ್ನಾಯುವಿನ ಮಧ್ಯದ ದುರ್ಬಲ ಭಾಗದ ಮೂಲಕ ಹೊರಗೆ ತಳ್ಳಿ ಉಬ್ಬುವ ಸ್ಥಿತಿ. ಇದು ಸಾಮಾನ್ಯವಾಗಿ ಹೊಟ್ಟೆ, ತೊಡೆಸಂದಿ ಅಥವಾ ಹೊಕ್ಕುಳ ಬಳಿ ಕಾಣಿಸಿಕೊಳ್ಳುತ್ತದೆ.
ಹರ್ನಿಯಾ ಏಕೆ ಉಂಟಾಗುತ್ತದೆ
- ಉದರ ಮತ್ತು ತೊಡೆಸಂದುಗಳ ಸ್ನಾಯು ದುರ್ಬಲಗೊಳ್ಳುವಾಗ
- ಅತಿಯಾಗಿ ಕೆಮ್ಮಿದಾಗ ಅಥವಾ ಮಲಬದ್ಧತೆ ಇದ್ದಾಗ
- ಭಾರವಾದ ವಸ್ತುಗಳನ್ನು ಎತ್ತಿದಾಗ
- ಜನ್ಮತಃ ಉಂಟಾಗುವ ದುರ್ಬಲ ಸ್ನಾಯುಗಳು
ಹರ್ನಿಯಾ ಲಕ್ಷಣಗಳು
- ಹೊಟ್ಟೆ ಅಥವಾ ತೊಡೆಸಂದಿಯಲ್ಲಿ ಗಂಟು ಕಾಣಿಸಿಕೊಳ್ಳುವುದು
- ಕೆಲವೊಮ್ಮೆ ನೋವು ಇಲ್ಲದಿರುವುದು
- ಗಂಟು ಕಣ್ಣು ಮುಚ್ಚಿದಾಗ ಅಥವಾ ಮಲಗಿದಾಗ ಕಾಣೆಯಾಗುವುದು
- ತೀವ್ರವಾದರೆ ನೋವು, ವಾಕರಿಕೆ, ಊಟ ಸೇರದಿರುವುದು
ಹರ್ನಿಯಾ ಚಿಕಿತ್ಸೆ
- ಆರಂಭಿಕ ಹಂತದಲ್ಲಿ ಕಡಿಮೆ ತೊಂದರೆ ನೀಡಬಹುದು
- ದೊಡ್ಡ ಹರ್ನಿಯಾ ಸಮಸ್ಯೆ ಜೀವಕ್ಕೆ ಹಾನಿ ಮಾಡಬಹುದು
- ಶಸ್ತ್ರಚಿಕಿತ್ಸೆಯೇ ನಿರ್ಣಾಯಕ ಪರಿಹಾರ
- ಹರ್ನಿಯೋಪ್ಲ್ಯಾಸ್ಟಿ ವಿಧಾನದಲ್ಲಿ ಗ್ಯಾಪ್ ಮುಚ್ಚಿ, ಮೆಶ್ ಅಳವಡಿಸಲಾಗುತ್ತದೆ
ಶಸ್ತ್ರಚಿಕಿತ್ಸೆ ನಂತರ ಎಚ್ಚರಿಕೆ
- 1-2 ತಿಂಗಳವರೆಗೆ ಭಾರವಾದ ಕೆಲಸ ಬೇಡ
- ಶೀತ, ಕೆಮ್ಮು ಇಲ್ಲದಂತೆ ಜಾಗರೂಕತೆ
- ತಜ್ಞರ ಸಲಹೆ ಮೇರೆಗೆ ಆಹಾರ, ವ್ಯಾಯಾಮ ಅಳವಡಿಸಿಕೊಳ್ಳಿ
ಹರ್ನಿಯಾ ಚಿಕ್ಕ ಸಮಸ್ಯೆ ಅನಿಸಿದರೂ ನಿರ್ಲಕ್ಷಿಸಬೇಡಿ. ಪ್ರಾರಂಭದಲ್ಲಿಯೇ ಚಿಕಿತ್ಸೆ ಪಡೆದರೆ ತೊಂದರೆ ತಪ್ಪಿಸಿಕೊಳ್ಳಬಹುದು.
ಸೂಚನೆ: ಇಲ್ಲಿರುವ ವಿಷಯಗಳು ಮಾಹಿತಿಗಾಗಿ ಮಾತ್ರ. ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿದ್ದ ಸಂದರ್ಭದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.