Home Sports Cricket ICC ಅಂಡರ್ 19 ಕ್ರಿಕೆಟ್ World Cup ನಲ್ಲಿ ಭಾರತ ಶುಭಾರಂಭ

ICC ಅಂಡರ್ 19 ಕ್ರಿಕೆಟ್ World Cup ನಲ್ಲಿ ಭಾರತ ಶುಭಾರಂಭ

ICC Under-19 Cricket World Cup India South Africa U-19

Guyana, West Indies : West Indies ನಲ್ಲಿ ನಡೆಯುತ್ತಿರುವ 2022 ICC Under-19 Cricket World Cup ನಲ್ಲಿ ಭಾರತ, South Africa ವಿರುದ್ಧ 45 ರನ್ ಗಳ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.

Guyana ದ Providence Stadium ನಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ತಂಡದ ಕಾಪ್ಟನ್ George Van Heerden ಬೌಲಿಂಗ್ ಆಯ್ಕೆ ಮಾಡಿದರು.

ನಾಯಕನ ಈ ನಿರ್ಣಯ ಸರಿ ಎಂಬಂತೆ ಸೌತ್ ಆಫ್ರಿಕಾದ ಬೌಲರ್ Aphiwe Mnyanda ಭಾರತದ ಆರಂಭಿಕ ಜೋಡಿ Harnoor Singh ಮತ್ತು Angkrish Raghuvanshi ಯ ವಿಕೆಟ್ ಗಳನ್ನು 11 ರನ್ ಗಳಿಗೆ ಪಡೆದು ಆಘಾತ ನೀಡಿದರು.

3ನೇ ವಿಕೆಟ್ ಗೆ ಜೊತೆಯಾದ ನಾಯಕ Yash Dhull ಮತ್ತು ಉಪ ನಾಯಕ Shaik Rasheed 71 ರನ್ ಗಳಿಂದ ಭಾರತಕ್ಕೆ ಚೇತರಿಕೆ ನೀಡಿದರು.

19.4 ಓವರ್ನಲ್ಲಿ Liam Alder, Shaik Rasheed ರನ್ನು LBW ಮೂಲಕ ವಿಕೇಟ್ ಪಡೆದು ಜೊತೆಯಾಟಕ್ಕೆ ಕಡಿವಾಣ ಹಾಕಿದರು. ಬಳಿಕ ನಾಯಕನೊಡನೆ ಜೊತೆಯಾದ Nishant Sindhu, Raj Bawa ಸಮಯೋಜಿತ ಆಟವಾಡಿದರು.

ನಾಯಕ Yash Dhull 82 ರನ್ ಗಳಿಸಿದ್ದಾಗ Simelane ರ ರನೌಟ್ ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಹಾದಿ ಹಿಡಿದರು. ಅಂತಿಮವಾಗಿ Team India 46.5 ಓವರ್ ಗಳಲ್ಲಿ 232 ರನ್ ಗಳಿಗೆ ಸರ್ವಪತನ ಕಂಡಿತು. ಸೌತ್ ಆಫ್ರಿಕಾ ಪರ Matthew Boast 3 ವಿಕೆಟ್ ಪಡೆದು ಮಿಂಚಿದರು.

233 ರನ್ ಗುರಿ ಬೆನ್ನತ್ತಿದ್ದ ಸೌತ್ ಆಫ್ರಿಕಾಗೆ ಮೊದಲ Over ನಲ್ಲೆ Rajvardhan Hangargekar, Ethan John Cunningham ವಿಕೆಟ್ ಪಡೆಯುವ ಮೂಲಕ ಆಘಾತ ನೀಡಿದರು.

2 ನೇ ವಿಕೇಟ್ ಗೆ ಜೊತೆಯಾದ Valintine Kitime ಮತ್ತು Dewald Brevis 58 ರನ್ ಗಳ ಜೊತೆಯಾಟವಾಡಿದರು. ಈ ಜೋಡಿಯನ್ನು Vicky Ostwal ಬೇರ್ಪಡಿಸಿದರು.

ಸೌತ್ ಆಫ್ರಿಕಾ ಬ್ಯಾಟ್ಸಮನ್ ಗಳನ್ನು ಎಡಗೈ ಸ್ಪಿನ್ನರ್ Vicky Ostwal ಮತ್ತು ಎಡಗೈ ವೇಗಿ Raj Bawa ಕಾಡಿದರು. ಅಂತಿಮವಾಗಿ ಸೌತ್ ಆಫ್ರಿಕಾ 45.4 ಓವೆರ್ ಗಳಲ್ಲಿ 187 ರನ್ ಗಳಿಸಲು ಮಾತ್ರ ಶಕ್ತವಾಯಿತು.

5 ವಿಕೆಟ್ ಪಡೆದ ಭಾರತದ ಎಡಗೈ ಸ್ಪಿನ್ನರ್ Vicky Ostwal ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.


Image: BCCI

NO COMMENTS

LEAVE A REPLY

Please enter your comment!
Please enter your name here
This site is protected by reCAPTCHA and the Google Privacy Policy and Terms of Service apply.

The reCAPTCHA verification period has expired. Please reload the page.

You cannot copy content of this page

Exit mobile version