New Delhi : ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಐಐಟಿ ಮದ್ರಾಸ್ ಅತ್ಯುತ್ತಮ ಶಿಕ್ಷಣ ಸಂಸ್ಥೆಯಾಗಿ ಮೊದಲ ಸ್ಥಾನ ಪಡೆದರೆ, ಬೆಂಗಳೂರಿನಲ್ಲಿರುವ (Bangalore/Bengaluru) ಭಾರತೀಯ ವಿಜ್ಞಾನ ಸಂಸ್ಥೆ (Indian Institute of Science – IISc) 2ನೇ ಸ್ಥಾನ ಪಡೆದಿದೆ.
ಇಂಜಿನಿಯರಿಂಗ್, ಕಾನೂನು, ವೈದ್ಯಕೀಯ, ದಂತ ವೈದ್ಯಕೀಯ ಮೊದಲಾದ 11 ವಿಭಾಗಗಳಲ್ಲಿ ಶ್ರೇಯಾಂಕಗಳನ್ನು ನೀಡಿರುವ ಕೇಂದ್ರ ಸರ್ಕಾರದ ಪಟ್ಟಿಯಲ್ಲಿ ಕಳೆದ ವರ್ಷ ದಂತ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿದ್ದ ಕರ್ನಾಟಕದ ಉಡುಪಿಯ ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್ (Manipal College of Dental Sciences) ಈ ಬಾರಿ 2ನೇ ಸ್ಥಾನ ಪಡೆದಿದೆ.
- Advertisement -