New Delhi, India : ಭಾರತದ Covid-19 ದೈನಂದಿನ ಪ್ರಕರಣಗಳು 24 ಗಂಟೆಗಳಲ್ಲಿ 13% ರಷ್ಟು ಏರಿಕೆಯಾಗಿದ್ದು, ಭಾರತದಲ್ಲಿ ಭಾನುವಾರ 1.79 ಲಕ್ಷಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ 1,79,723 ಹೊಸ ಪ್ರಕರಣಗಳು (Cases) ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 7,23,619 ಕ್ಕೆ ತಲುಪಿದೆ. 46,569 ಜನ ಗುಣಮುಖರಾಗಿದ್ದು, 146 ಜನ ಮರಣ ಹೊಂದಿದ್ದಾರೆ ಎಂದು ಅರೋಗ್ಯ ಮಂತ್ರಾಲಯ ತಿಳಿಸಿದೆ.
ದೈನಂದಿನ Positivity Rate ಶೇಕಡಾ 10.21 ರಷ್ಟು ದಾಖಲಾಗಿದ್ದರೆ, ಭಾರತದಲ್ಲಿ ಪ್ರಸ್ತುತ Omicron ಸೋಂಕುಗಳ ಒಟ್ಟು ಸಂಖ್ಯೆ 4,033 ಇದೆ.