Bengaluru: 27ನೇ ಬೆಂಗಳೂರು ಟೆಕ್ ಶೃಂಗಸಭೆಯಲ್ಲಿ, ಇನ್ಫೋಸಿಸ್ (Infosys) ಕಂಪನಿಗೆ ‘ಕರ್ನಾಟಕದ ಐಟಿ ರತ್ನ’ (IT Ratna of Karnataka) ಪ್ರಶಸ್ತಿ ದೊರೆಯಿತು. ಈ ಪ್ರಶಸ್ತಿಯನ್ನು ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (Software Technology Parks of India-STPI) ನೀಡುತ್ತದೆ ಮತ್ತು 10,000 ಕೋಟಿ ರೂ.ಕ್ಕಿಂತ ಹೆಚ್ಚು ರಫ್ತು ಮಾಡಿದ ಕಂಪನಿಗಳಿಗೆ ನೀಡಲಾಗುತ್ತದೆ.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಇನ್ಫೋಸಿಸ್ ಸೇರಿದಂತೆ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ರಾಬರ್ಟ್ ಬಾಷ್, ಇಂಟೆಲ್, ಅಮೆಜಾನ್ ಡೆವಲಪ್ಮೆಂಟ್ ಸೆಂಟರ್, ಜೆ.ಪಿ.ಮಾರ್ಗನ್, ಗೋಲ್ಡನ್ ಸ್ಯಾಕ್ಸ್, ಸ್ಯಾಮ್ಸಂಗ್ ಆರ್ ಆ್ಯಡ್ ಡಿ, ಕ್ವಾಲ್ಕಾಂ ಇಂಡಿಯಾ ಮುಂತಾದ ಪ್ರಮುಖ ಕಂಪನಿಗಳಿಗೆ ಎಸ್.ಟಿ.ಪಿ.ಐ-ಐಟಿ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರು ತಮ್ಮ ಭಾಷಣದಲ್ಲಿ, “ಉದ್ಯಮಿಗಳು ಕೇವಲ ಲಾಭವನ್ನು ಮಾತ್ರ ನೋಡುತ್ತಿರುವುದಿಲ್ಲ, ಅವರ ಪರಿಶ್ರಮದಿಂದ ತಂತ್ರಜ್ಞಾನದ ಭವಿಷ್ಯವೂ ರೂಪಿತವಾಗುತ್ತಿದೆ. ಈ ಸಂದರ್ಭದಲ್ಲಿ ರಾಜ್ಯದಲ್ಲಿ ನೆಲೆಯೂರಿರುವ ಐಟಿ ಕಂಪನಿಗಳು ಶ್ಲಾಘನೀಯ ಕೆಲಸ ಮಾಡುತ್ತಿವೆ” ಎಂದರು.