
ಸಮಯಕ್ಕೆ ಸರಿಯಾಗಿ ಸದನಕ್ಕೆ ಬರುವ ಶಾಸಕರಿಗೆ ವಿಶೇಷ ಬಹುಮಾನ ನೀಡುವುದಾಗಿ ಸ್ಪೀಕರ್ ಖಾದರ್ (U T Khader) ಘೋಷಿಸಿದ್ದಾರೆ. ಅಧಿವೇಶನದಲ್ಲಿ ಸಮಯಪ್ರಜ್ಞೆ ತೋರಿಸಿದ ಶಾಸಕರೆಂದು ದರ್ಶನ್ ಪುಟ್ಟಣ್ಣಯ್ಯ, ಕೌಜಲಗಿ ಮಹಾಂತೇಶ್, ಎಸ್ ಸುರೇಶ್ ಕುಮಾರ್, ಪ್ರದೀಪ್ ಈಶ್ವರ್, ಎಸ್ ಆರ್ ಶ್ರೀನಿವಾಸ್, ಲತಾ ಮಲ್ಲಿಕಾರ್ಜುನ, ಶಿವಲಿಂಗೇಗೌಡರ ಹೆಸರನ್ನು ತಿಳಿಸಿ, ಅವರ ಸಮಯಪಾಲನೆ ಸಭಾಧ್ಯಕ್ಷರು ಶ್ಲಾಘಿಸಿದ್ದಾರೆ.
ಚರ್ಚೆಯ ಸಂದರ್ಭದಲ್ಲಿ, ಕೆಲವು ಶಾಸಕರು ಭೌತಿಕ ಬಹುಮಾನಗಳ ಬದಲಿಗೆ ಪ್ರಮಾಣಪತ್ರಗಳನ್ನು ನೀಡುವ ಆಲೋಚನೆಯನ್ನು ಪ್ರಸ್ತಾಪಿಸಿದರು. ಶಾಸಕ ಸುನೀಲ್‌ಕುಮಾರ್ ತಮ್ಮ ಹೆಸರು ಪಟ್ಟಿಯಲ್ಲಿ ಇಲ್ಲದಿರುವುದರಿಂದ ಬೇಸರ ವ್ಯಕ್ತಪಡಿಸಿದರು. ಅನೇಕ ಶಾಸಕರು ಮತ್ತು ಸಚಿವರು ಈ ನಿಯಮದ ಪರವಾಗಿಲ್ಲ ಎಂದು ಪ್ರಿಯಾಂಕ್ ಖರ್ಗೆ ಪ್ರಸ್ತಾಪಿಸಿದರು. ಮತ್ತೋರ್ವ ಶಾಸಕ ನಾಡಗೌಡ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಬಳಸಿಕೊಳ್ಳುವಂತೆ ಸೂಚಿಸಿದರು. ಶಾಸಕರು ಸಾಮೂಹಿಕವಾಗಿ ಸ್ಪೀಕರ್ ಖಾದರ್ ಅವರಿಗೆ ಮನವಿ ಸಲ್ಲಿಸಿದರು. ಪರ್ಯಾಯವಾಗಿ ಪ್ರಮಾಣ ಪತ್ರ ನೀಡುವಂತೆ ಸಭಾಧ್ಯಕ್ಷರನ್ನು ಮನವಿ ಮಾಡಿದರು.